ದೇವನಹಳ್ಳಿ:- ಬ್ಯಾಂಕಾಕ್ ನಲ್ಲಿ ಪ್ರಬಲ ಭೂಕಂಪ ಹಿನ್ನೆಲೆ ಇದೀಗ ಸುರಕ್ಷಿತವಾಗಿ ಬ್ಯಾಂಕಾಕ್ ನಿಂದ ಕನ್ನಡಿಗರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ.
CSK ವಿರುದ್ಧ RCBಗೆ ಭರ್ಜರಿ ಜಯ: ಬೆಂಗಳೂರು ತಂಡವನ್ನು ಹಾಡಿ ಹೊಗಳಿದ ಎಬಿಡಿ!
ಕೆಂಪೇಗೌಡ ಏರ್ಪೋಟ್ ಮೂಲಕ ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ್ದು, ಪತ್ನಿ ಮಕ್ಕಳ ಸಮೇತ ಟ್ರಿಪ್ ಗೆ ಹೋಗಿದ್ದವರು ಭೂಕಂಪದಿಂದ ಸಧ್ಯ ವಾಪಸ್ ಆಗಿದ್ದಾರೆ. ಮಧ್ಯಾಹ್ನ 03:30 ರ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಇದೀಗ ಬೆಂಗಳೂರಿಗೆ ವಾಪಸ್ ಆದ ಪ್ರಯಾಣಿಕರು, ಭೂಕಂಪದ ಅನುಭವ ಹಂಚಿಕೊಂಡಿದ್ದಾರೆ.
ಮೂರು ನಾಲ್ಕು ದಿನಗಳ ಟ್ರಿಪ್ಗೆ ಹೋಗಿದ್ದವರು ಭೂಕಂಪದ ಭಯದಿಂದ ನಿಗಧಿತ ಸಮಯಕ್ಕೂ ಮೊದಲೆ ವಾಪಸ್ ಆಗಿದ್ದಾರೆ. ಏರ್ಪೋಟ್ ಗೆ ಬಂದು ಏರ್ಪೋಟ್ ನಿಂದ ಮನೆಗಳತ್ತ ಪ್ರಯಾಣ ಬೆಳೆಸಿದ್ದಾರೆ.