ಧಾರವಾಡ : ನೀರು ಎಂದು ತಿಳಿದು ಆಸಿಡ್ ಕುಡಿದಿರುವ ಘಟನೆ ಧಾರವಾಡ ನಗರದ ಗಾಂಧಿನಗರದ ಸರ್ಕಾರಿ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ನಡೆದಿದೆ. ಕಳೆದ ಜೂನ್ 30 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿನ ಕುಬೇರ್ ಲಮಾಣಿ ಎಂಬ ವಿದ್ಯಾರ್ಥಿ ಹಾಸ್ಟೆಲ್‌ಲ್ಲಿ ಆಸಿಡ್ ಬಾಟಲ್ ನಲ್ಲಿ ತುಂಬಿ ಇಟ್ಟಿದ್ದನ್ನು ನೋಡಿ, ನೀರು ಎಂದು ಕುಡಿದಿದ್ದಾನೆ.
ವಿಜಯನಗರದ ಹೂವಿನಹಡಗಲಿಯ ಮೈಲಾರ ಗ್ರಾಮದ ವಿದ್ಯಾರ್ಥಿ ಕುಬೇರ್ ಲಮಾಣಿ ಧಾರವಾಡ ಅಂಜುಮನ್ ಕಾಲೇಜಿನಲ್ಲಿ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಸದ್ಯ ವಿದ್ಯಾರ್ಥಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಗಂಟಲು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.