ಬೆಂಗಳೂರು: ತಲೆ ತಿರುಗಿ ವಿದ್ಯಾರ್ಥಿನಿ ಇಂದು ಮದ್ಯಾಹ್ನ 1ಘಂಟೆಯ ಸುಮಾರಿಗೆ ಎರಡನೇ ಮಹಡಿಯಿಂದ ಬಿದ್ದ ಘಟನೆ ಮಲ್ಲೇಶ್ವರಂ 13 ನೇ ಕ್ರಾಸ್ನ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಕೃತಿಕಾ (12) ಎರಡನೇ ಫ್ಲೋರ್ ನಿಂದ ಕೆಳಗಡೆ ಬಿದ್ದ ವಿದ್ಯಾರ್ಥಿನಿಯಾಗಿದ್ದು, ಹತ್ತನೆ ತರತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು.
ಹಳೆಯ ಬಟ್ಟೆ ಎಸೆಯೋದು ಅಥವಾ ದಾನ ಮಾಡೋದು.. ಇದರಲ್ಲಿ ಯಾವುದು ಒಳ್ಳೆಯದು?
ಕೃತಿಕಾ ಕೆಳ ಬೀಳುತ್ತಿದ್ದಂತೆ ಕೆಳಗಡೆಯಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ರಕ್ಷಣೆ ಮಾಡಲಾಗಿದೆ. ಸದ್ಯ ಕೃತಿಕಾ ಪ್ರಾಣಾಪಾಯದಿಂದ ಪಾರಾಗಿದ್ದು, ಕೈ ಮತ್ತು ಕಾಲುಗಳಿಗೆ ಸಣ್ಣ ಪುಟ್ಟಗಾಯಗಳಾಗಿವೆ. ಸದ್ಯ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಲ್ಲೇಶ್ವರಂ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.