ಹುಬ್ಬಳ್ಳಿ: ತಾಲೂಕಿನ ಇಂಗಳಹಳ್ಳಿ ಗ್ರಾಮದ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಶ್ರೀ ಮೃತ್ಯುಂಜಯ ಪ್ರೌಢಶಾಲೆಯ ವಿದ್ಯಾರ್ಥಿಗಳು 2024-25 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.
ಅಶ್ವಿನಿ ಕಾಡದೇವರಮಠ 569 ಅಂಕ ಗಳಿಸಿ 91.04% ದೊಂದಿಗೆ ಶಾಲೆಗೆ ಪ್ರಥಮ ಸ್ಥಾನ, ಅಶ್ವಿನಿ ಬಾರ್ಕಿ 542 ಅಂಕ ಗಳಿಸಿ 86.72% ದೊಂದಿಗೆ ದ್ವಿತೀಯ ಸ್ಥಾನ ಹಾಗೂ ಹಾಜಿರಾ ಕಾಶೀಂಖಾನವರ 523 ಅಂಕ ಪಡೆಯೋ ಮೂಲಕ 83.68% ದೊಂದಿಗೆ ಶಾಲೆಗೆ ತೃತಿಯ ಸ್ಥಾನ ಪಡೆದುಕೊಂಡಿದ್ದಾಳೆ.
Red Blood Cells: ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಿಸಲು ಈ ಆಹಾರ ಪದಾರ್ಥ ಸೇವಿಸಿ!
ಉಳಿದಂತೆ ದಾವಲಸಾಬ ಕಾಲೇಖಾನವರ 519 ಅಂಕ ಪಡೆದು 83.04%, ಪೂಜಾ ಗಣಾಚಾರಿ 508 ಅಂಕ ಪಡೆದು 81.28%, ಈರವ್ವ ಮರೆಪ್ಪಗೌಡ್ರ 493 ಅಂಕ ಪಡೆದು 78.88%, ಸನಾ ನಾಯ್ಕರ್ 493 ಅಂಕ ಪಡೆದು 78.88%, ಶ್ವೇತಾ ಹವಳಪ್ಪನವರ 490 ಅಂಕ ಪಡೆದು 78.40%, ನೇತ್ರಾವತಿ ಮಡಿವಾಳರ 475 ಅಂಕ ಪಡೆದು 76%, ಮಕ್ತುಂಬಿ ಯಲಿಗಾರ 466 ಅಂಕ ಪಡೆದು 74.56 ಮತ್ತು ರಿಯಾಜ್ ನಾಯ್ಕರ್ 465 ಅಂಕ ಪಡೆದು 74.40% ದೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಡಾ. ತೋಂಟದ ಸಿಧ್ಧರಾಮ ಮಹಾಸ್ವಾಮೀಜಿಗಳು, ಸಂಸ್ಥೆಯ ಕಾರ್ಯದರ್ಶಿ ಎಸ್ ಎಸ್ ಪಟ್ಟಣಶೆಟ್ಟರ, ಮುಖ್ಯೋಪಾಧ್ಯಾಯರಾದ ಕೆ ಸಿ ಪಟ್ಟಣಶೆಟ್ಟಿ, ಸಿಬ್ಬಂದಿವರ್ಗ ಮತ್ತು ಇಂಗಳಹಳ್ಳಿ ಗ್ರಾಮದ ಗುರು ಹಿರಿಯರು ಅಭಿನಂದಿಸಿದ್ದಾರೆ.