ಕೋಲಾರ : ವಿದ್ಯಾರ್ಥಿಗಳಿಗೆ ವಿದ್ಯೆ ಒಂದೇ ಇದ್ದರೆ ಆಗುವುದಿಲ್ಲ, ಬುದ್ದಿ ಒಂದೇ ಇದ್ದರೂ ಆಗುವುದಿಲ್ಲ. ವಿದ್ಯೆ, ಬುದ್ದಿ ಎರಡು ಜೊತೆಯಲ್ಲಿ ಇರಬೇಕು. ಇವೆರಡೂ ಇದ್ದರೆ ಸಮಾಜದಲ್ಲಿ ನಾವು ಮುಂದೆ ಬರುವುದಕ್ಕೆ ಸಾಧ್ಯವಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಅವರು ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಲಾರ ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಡುರಸ್ತೆಯಲ್ಲೇ ಹೊತ್ತುರಿದ ಕಾರು ; ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
ಯುಪಿಎಸ್ ಅಲ್ಲಿ ಪಾಸ್ ಆಗಿರುವ ಕೋಲಾರದ ಹುಡುಗ ಎಲ್ಲೂ ಸಹ ಟ್ರೈನಿಂಗ್ ಹೋಗಿಲ್ಲ, ಕೋಚಿಂಗ್ ಹೋಗಿಲ್ಲ. ದೆಹಲಿಗೆ ಹೋಗಿ ಯಾವುದೇ ತರಹದ ಕೋಚಿಂಗ್ ಸೆಂಟರ್ ಗೆ ಹೋಗಿಲ್ಲ. ಮನೆಯಲ್ಲಿ ಓದಿ ಯುಪಿಎಸ್ ಪಾಸ್ ಆಗಿದ್ದಾನೆ. ವರ್ಷಾನುಗಟ್ಟಲೆ ಓದಿ ಕೋಚಿಂಗ್ ಪಡೆದುಕೊಂಡು ಇದ್ದರು ಪಾಸ್ ಆಗುವುದಿಲ್ಲ. ಜಿಲ್ಲೆಯ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತುಕೊಂಡು ಓದಿದರೆ ಪರೀಕ್ಷೆಯಲ್ಲಿ ಪಾಸ್ ಹಾಗುತ್ತಾರೆ. ಇದು ಕೋಲಾರ ಜಿಲ್ಲೆಯ ಮಹಿಮೆ, ಅಷ್ಟು ಬುದ್ದಿವಂತರು ಈ ಜಿಲ್ಲೆಯಲ್ಲಿ ಇದ್ದಾರೆ. ಪ್ರತಿಯೊಬ್ಬರು ಇದೇ ರೀತಿಯಾಗಿ ಆಗಬೇಕು ಎಂದು ಹೇಳಿದರು.