ಗದಗ: ತಾಲೂಕಿನ ಹಿರೇಹಂದಿಗೋಳ ಗ್ರಾಮದ ಮಾರುತೇಶ್ವರ ಜೀರ್ಣೋದ್ಧಾರ ಸೇವಾ ಸಮಿತಿ ಹಾಗೂ ಶಿಕ್ಷಣ ಪ್ರೇಮಿಗಳ ವತಿಯಿಂದ ಮಾರುತೇಶ್ವರ ದೇವಸ್ಥಾನದಲ್ಲಿ 2024-25 ನೇ ಸಾಲಿನ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲು ಹಾಕಿ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಹುಲಕೋಟಿ ಕೆ ಎಚ್ ಪಾಟೀಲ್ ವಿದ್ಯಾ ಮಂದಿರದಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿರೇಹಂದಿಗೋಳ ಗ್ರಾಮದ ಉಮೇಶ ಈರಪ್ಪ ಗೊಬ್ಬರಗುಂಪಿ 613 ಅಂಕ ಪಡೆದರೆ, ಅದೇ ಶಾಲೆಯ ಇನ್ನೋರ್ವ ವಿದ್ಯಾರ್ಥಿ ಶ್ರೀಕಾಂತ್ ನಿಂಗಪ್ಪ ಮಡಿವಾಳರ 566 ಅಂಕಗಳನ್ನು ಪಡೆದಿದ್ದಾನೆ. ಹಿರೇಹಂದಿಗೋಳ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕಲ್ಲನಗೌಡ ಹನುಮಂತಗೌಡ ಹುಲ್ಲೂರು 542 ಅಂಕಗಳನ್ನು ಪಡೆಯೋ ಮೂಲಕ ಸಾಧನೆ ಮಾಡಿದ್ದಾರೆ. ಆ ಮೂಲಕ ಹಿರೇಹಂದಿಗೋಳ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿಗಳು ತಂದೆ ತಾಯಿಯ ಸಹಕಾರ, ಪ್ರೋತ್ಸಾಹ, ಶಾಲೆಯಲ್ಲಿ ಶಿಕ್ಷಕರು ನೀಡಿದ ಮಾರ್ಗದರ್ಶನದ ಫಲವಾಗಿ ನಾವಿಂದು ಎಸ್ ಎಸ್ ಎಲ್ ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಲು ಸಾಧ್ಯವಾಯಿತೆಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರೇಹಂದಿಗೋಳ ಗ್ರಾಮದ ಶಿಕ್ಷಣ ಪ್ರೇಮಿಗಳಾದ ಅರುಣ ಪೂಜಾರ, ಮುತ್ತಣ್ಣ ಹೂಗಾರ್, ಈರಣ್ಣ ಹೊಸಮಠ, ಶಿವಶಂಕ್ರಪ್ಪ ಆರಟ್ಟಿ, ಗಿರಿಮಲ್ಲಪ್ಪ ಕುರ್ತಕೋಟಿ, ಜಕ್ಕನಗೌಡ ಜಕ್ಕನಗೌಡ್ರ, ವಿದ್ಯಾರ್ಥಿಗಳ ಸಾಧನೆ ಕುರಿತು ಮಾತನಾಡಿ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನ ಚೆನ್ನಾಗಿರಲಿ ಎಂದು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ಬಿಂಕದಕಟ್ಟಿ ಗ್ರಾಮ ಪಂಚಾಯತ್ ಸದಸ್ಯ ನಿಂಗಪ್ಪ ಪರಪ್ಪನವರ,
ಹೊಂಬಳದ ಪಿ. ಪಿ. ಪತ್ತಾರ, ಶಂಕರಪ್ಪ ಗೊಬ್ಬರಗುಂಪಿ, ವಿರುಪಾಕ್ಷಿಗೌಡ ತಡಸಿ, ಹನುಮಂತಗೌಡ ಹುಲ್ಲೂರ, ಮುದುಕಣ್ಣ ಮಡಿವಾಳರ, ವೀರಭದ್ರಪ್ಪ ಕುರಹಟ್ಟಿ, ಶಿವಲಿಂಗಪ್ಪ ಆರಟ್ಟಿ, ಸುರೇಶ ಹೂಗಾರ, ಪ್ರಭು ಶಲವಡಿ, ಶರಣಪ್ಪ ಗೊಬ್ಬರಗುಂಪಿ, ಉಮೇಶ ಕುರಹಟ್ಟಿ, ಮೋಹನಗೌಡ ಹುಲ್ಲೂರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ತಂದೆ, ತಾಯಿ, ಅಜ್ಜ, ಅಜ್ಜಿ, ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಸಿಹಿ ಹಂಚಲಾಯಿತು. ಶಿಕ್ಷಕ ಅರುಣ ಪೂಜಾರ ಕಾರ್ಯಕ್ರಮ ನಿರೂಪಿಸಿದರೆ, ಕೊನೆಗೆ ಶಿವಸಂಕ್ರಪ್ಪ ಡಿ. ಆರಟ್ಟಿ ವಂದಿಸಿದರು.