Close Menu
Ain Live News
    Facebook X (Twitter) Instagram YouTube
    Friday, May 30
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಗಟ್ಟಿಮುಟ್ಟಾದ ಮೂಳೆ ನಿಮ್ಮದಾಗಬೇಕಾ!? ಹಾಗಿದ್ರೆ ಈ ಬೀಜಗಳನ್ನು ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ!

    By AIN AuthorMay 29, 2025
    Share
    Facebook Twitter LinkedIn Pinterest Email
    Demo

    ಜೀವನಶೈಲಿ ಹಾಗೂ ನಾವು ಸೇವನೆ ಮಾಡುತ್ತಿರುವ ಅನಾರೋಗ್ಯಕಾರಿ ಆಹಾರ ಪದ್ಧತಿ ಎಂದು ನೇರವಾಗಿ ಹೇಳಬಹುದು! ಅಲ್ಲದೆ ದೇಹಕ್ಕೆ ಸಿಗಬೇಕಾದ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಪೋಷಕಾಂಶಗಳಲ್ಲಿ ಕೊರತೆ ಕಾಣಿಸಿಕೊಂಡರೂ ಕೂಡ ಮೂಳೆಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

    ಮರ ತೆರವು ವೇಳೆ ಎರಡು ಗುಂಪುಗಳ ನಡುವೆ ಗಲಾಟೆ: 5 ಜನರ ವಿರುದ್ದ FIR : Video

    ಇಂತಹ ಪರಿಸ್ಥಿತಿಯಲ್ಲಿ, ಮೂಳೆಗಳನ್ನು ಬಲಪಡಿಸಲು, ದೈನಂದಿನ ಆಹಾರಪದ್ಧತಿಯಲ್ಲಿ ಹಾಗೂ ನಾವು ಅನುಸರಿಸುತ್ತಿರುವ ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವುದು ಅತ್ಯವಶ್ಯಕ. ಹೆಲ್ತ್‌ಲೈನ್ ಪ್ರಕಾರ, ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಅಂಶ ಹೆಚ್ಚಿರುವ ಆಹಾರಪದಾರ್ಥಗಳ ಸೇವನೆ ಮಾಡುವುದು ತುಂಬಾನೇ ಅವಶ್ಯಕ ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ, ಮೂಳೆಗಳು ಸ್ಟ್ರಾಂಗ್ ಆಗಿರಬೇಕು ಎಂದರೆ ಕೆಲವೊಂದು ನೈಸರ್ಗಿಕವಾಗಿ ಸಿಗುವ ಬೀಜಗಳನ್ನು ನಮ್ಮ ಆಹಾರಪದ್ಧತಿಯಲ್ಲಿ ಸೇರಿಸಿಕೊಳ್ಳಬೇಕು

    ನೈಸರ್ಗಿಕವಾಗಿ ಸಿಗುವ ಕೆಲವೊಂದು ಬಗೆಯ ಬೀಜಗಳಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅಧಿಕವಾಗಿದ್ದು, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
    ಹೀಗಾಗಿ ಪ್ರತಿದಿನ ಇಂತಹ ಬೀಜಗಳನ್ನು ನಿಯಮಿತವಾಗಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಮೂಳೆ ಗಳನ್ನು ಬಲಪಡಿಸಲು ನೆರವಾಗುತ್ತದೆ. ಹಾಗಾದರೆ ಯಾವ ಬಗೆಯ ಬೀಜಗಳು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದರ ಬಗ್ಗೆ ನೋಡೋಣ… ​

    ಗಾತ್ರದಲ್ಲಿ ತುಂಬಾನೇ ಸಣ್ಣದಾಗಿರುವ ಚಿಯಾ ಬೀಜಗಳಲ್ಲಿ, ಅಗಾಧ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳು ಕಂಡು ಬರುತ್ತದೆ! ಪ್ರಮುಖವಾಗಿ ಈ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರಿನಾಂಶ, ಅಧಿಕ ಪ್ರಮಾಣದಲ್ಲಿ ಪ್ರೋಟೀನ್, ಒಮೆಗಾ -3 ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ ಹಾಗೂ ಮೆಗ್ನೀಸಿ ಯಮ್ ಅಂಶಗಳು ಯಥೇಚ್ಛವಾಗಿ ಕಂಡುಬರುವುದರಿಂದ ಹಲ್ಲುಗಳ ಆರೋಗ್ಯಕ್ಕೆ ಹಾಗೂ ದೇಹದ ಮೂಳೆಗಳನ್ನು ಗಟ್ಟಿಯಾಗಲು ಸಹಾಯ ಮಾಡುತ್ತದೆ. ಹೀಗಾಗಿ ಈ ಬೀಜಗಳ ಸಂಪೂರ್ಣ ಲಾಭ ಪಡೆಯಲು, ಈ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

    ಕ್ಯಾಲ್ಸಿಯಂ, ಮೆಗ್ನೀಸಿಯಮ್, ವಿಟಮಿನ್ ಡಿ ಹೆಚ್ಚಾಗಿ ಹೆಚ್ಚಿರುವ ಆಹಾರಪದಾರ್ಥಗಳನ್ನು ಅಥವಾ ಪಾನೀಯಗಳನ್ನು ಸೇವನೆ ಮಾಡುವುದರಿಂದ, ಮೂಳೆಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವುದು ವೈದ್ಯರ ಮಾತು.
    ಈ ನಿಟ್ಟಿನಲ್ಲಿ ನೋಡುವುದಾದರ ಎಳ್ಳಿನ ಬೀಜಗಳು ತುಂಬಾನೇ ನೆರವಾಗುತ್ತದೆ ಎನ್ನುತ್ತಾರೆ ತಜ್ಞರು! ಸರಿಸುಮಾರು ಕಾಲು ಕಪ್ ಎಳ್ಳಿನ ಬೀಜಗಳಲ್ಲಿ, ಏನಿಲ್ಲಾ ಅಂದರೂ ಕೂಡ 350 ಮಿಲಿಗ್ರಾಂ ನಷ್ಟು ಕ್ಯಾಲ್ಸಿಯಂ ಕಂಡು ಬರುತ್ತದೆಯಂತೆ!

    ಹೀಗಾಗಿ ಈ ಪುಟ್ಟ ಬೀಜಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳಲು ತಮ್ಮ ದೈನಂದಿನ ಆಹಾರಪದ್ಧತಿಯಲ್ಲಿ ಸೇರಿಸಿ ಕೊಂಡರೆ ಒಳ್ಳೆಯದು. ಬೇಕಿದ್ದರೆ ಇದರ ಲಡ್ಡು ಮಾಡಿ ಸೇವನೆ ಮಾಡಬಹುದು ಇಲ್ಲಾಂದ್ರೆ ಎಳ್ಳಿನ ಜ್ಯೂಸ್ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಂಡರೂ ಕೂಡ, ಮೂಳೆಗಳಿಗೆ ಸಿಗಬೇಕಾದ ಎಲ್ಲಾ ಪೋಷಕಾಂಶಗಳು ಸಿಕ್ಕಂತೆ ಆಗುತ್ತದೆ.

    ಅಗಸೆ ಬೀಜಗಳು ಕ್ಯಾಲ್ಸಿಯಂ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ, ಇವು ಮೂಳೆ ಸಾಂದ್ರತೆಯನ್ನು ಬಲಪಡಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಸಂಪೂರ್ಣ ಲಾಭಪಡೆಯಲು ಅಗಸೆ ಬೀಜಗಳ ಪುಡಿಯನ್ನು ದಿನನಿತ್ಯದ ಆಹಾರಕ್ರಮದಲ್ಲಿ ಬಳಸಿಕೊಳ್ಳಬಹುದು. ಆದರೆ ಒಂದು ವಿಚಾರ ನೆನಪಿರಲಿ ಈ ಅಗಸೆ ಬೀಜಗಳಲ್ಲಿ ಉಷ್ಣತೆ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ, ಸಣ್ಣ ಟೀ ಚಮಚದಷ್ಟು ಮಾತ್ರ ಸೇವಿಸಿ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಲು ಹೋಗಬೇಡಿ.

    ದುರ್ಬಲ ಮೂಳೆಗಳ ಸಮಸ್ಯೆಯನ್ನು ದೂರಮಾಡಲು, ಮಿತವಾಗಿ ಸೂರ್ಯಕಾಂತಿ ಬೀಜಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಒಳ್ಳೆಯದು. ಪ್ರಮುಖವಾಗಿ ಈ ಪುಟ್ಟ ಬೀಜಗಳಲ್ಲಿ ಮ್ಯಾಂಗ ನೀಸ್, ಕ್ಯಾಲ್ಸಿಯಂ, ಒಮೆಗಾ-3 ಕೊಬ್ಬಿನಾಮ್ಲಗಳಂತಹ ಅನೇಕ ಬಗೆಯ ಪೋಷಕಾಂಶಗಳು ಕಂಡು ಬರುವುದರಿಂದ, ಇವು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

    Demo
    Share. Facebook Twitter LinkedIn Email WhatsApp

    Related Posts

    ಕಿತ್ತಳೆ ಹಣ್ಣಿನ ಸಿಪ್ಪೆ ಎಸೆಯದಿರಿ: ಕಹಿಯಾದ್ರೂ ಇದರ ರಸದಲ್ಲಿ ಅಡಗಿದೆ ಆರೋಗ್ಯ ಸಿಹಿ!

    May 30, 2025

    ನೀವು ನಿತ್ಯ ಮೊಸರು ತಿನ್ನುತ್ತಿದ್ದೀರಾ!? ಹಾಗಿದ್ರೆ ದೇಹದ ಮೇಲಾಗುವ ಪರಿಣಾಮದ ಬಗ್ಗೆ ತಿಳಿಯಿರಿ

    May 28, 2025

    ಸೈಟ್ ರಿಜಿಸ್ಟರ್ ಆಗದೇ ಪರದಾಡುತ್ತಿದ್ದೀರಾ!? ನಿಮಗಿಲ್ಲಿದೆ ಗುಡ್ ನ್ಯೂಸ್!

    May 28, 2025

    ನಿಮಗಿದು ಗೊತ್ತಾ!? ಪ್ರತಿಯೊಬ್ಬರೂ ಮೊಳಕೆ ಬರಿಸಿದ ಹೆಸರುಕಾಳನ್ನು ತಿನ್ನಲೇಬೇಕಂತೆ! ಯಾಕೆ?

    May 28, 2025

    ಕಿಡ್ನಿ ಸ್ಟೋನ್‌ ಸಮಸ್ಯೆಯಿಂದ ಬಳಲುತ್ತಿದ್ದೀರಾ!? ಹಾಗಿದ್ರೆ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಚಮತ್ಕಾರ ಗ್ಯಾರಂಟಿ!

    May 28, 2025

    ನಿತ್ಯವೂ ಚಿಯಾ ಬೀಜಗಳು ಮತ್ತು ನಿಂಬೆ ಜ್ಯೂಸ್ ಕುಡಿದರೆ ಏನಾಗುತ್ತೆ?

    May 27, 2025

    ನಿತ್ಯ ಬೆಳಗ್ಗೆ ಕಾಫಿ, ಚಹಾ ಕುಡಿಯೋ ಮುನ್ನ ಒಂದು ಗ್ಲಾಸ್ ನೀರು ಕುಡಿಯಿರಿ!

    May 27, 2025

    ಇಡ್ಲಿ- ದೋಸೆ ಹಿಟ್ಟು ಹುಳಿ ಆಗುವುದನ್ನು ತಡೆಯಲು ಈ ಟಿಪ್ಸ್ ಫಾಲೋ ಮಾಡಿ!

    May 26, 2025

    ಯಾವುದೇ ಕಾರಣಕ್ಕೂ ಮಾವಿನಹಣ್ಣು ತಿಂದ್ಮೇಲೆ ಈ ತಪ್ಪನ್ನು ಮಾತ್ರ ಮಾಡ್ಬೇಡಿ: ಹೀಗಾದ್ರೆ ಜೀವಕ್ಕೆ ಅಪಾಯ ಫಿಕ್ಸ್!

    May 26, 2025

    ಕ್ರಿಕೆಟ್​ಗೆ ವಿದಾಯ ಹೇಳಿದ ಮತ್ತೋರ್ವ ಸ್ಟಾರ್ ಪ್ಲೇಯರ್!

    May 26, 2025

    ನಿಮಗೆ ಈ ಆರೋಗ್ಯ ಸಮಸ್ಯೆ ಇದ್ರೆ ಪಪ್ಪಾಯಿ ಹಣ್ಣು ತಿನ್ನುಬಾರದಂತೆ!

    May 26, 2025

    ದೇಶದಲ್ಲಿ 752 ಮಂದಿಗೆ ಕೋವಿಡ್ ಪಾಸಿಟಿವ್: ಈ ವೈರಸ್ ಹರಡುವುದನ್ನು ತಡೆಯೋದು ಹೇಗೆ..? ಇಲ್ಲಿದೆ ಮಾಹಿತಿ

    May 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.