ನಂಜನಗೂಡು:- ಕಳೆದ ಕೆಲವು ದಿನಗಳ ಹಿಂದಷ್ಟೆ ಸಿಎಂ ಸ್ವಕ್ಷೇತ್ರದ ವಾಜಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಎಸಗಿದ್ದ ಕಿಡಿಕೇಡಿಗಳು.ಇದೀಗ ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ಅಳವಡಿಸಿರುವ ಅಂಬೇಡ್ಕರ್ ರವರ ನಾಮಪಲಕಕ್ಕೆ ಅಪಮಾನ ಮಾಡಿ ಕೃತ್ಯ ಎಸಗಿದ್ದಾರೆ
ತುಂಬಾ ದಪ್ಪಗಿದ್ದೀನಿ ಅಂತ ಚಿಂತೆ ಕಾಡ್ತಿದ್ಯಾ!? ಈ ಬಗೆಯ ಹಣ್ಣುಗಳನ್ನು ಜಾಸ್ತಿ ತಿನ್ನಬೇಡಿ!
ಅಂಬೇಡ್ಕರ್ ಭಾವಚಿತ್ರ ಹರಿದು ಸಗಣಿ ಎರಚಿ ಮಣ್ಣು ಬಳಿದು ಅಪಮಾನ ಮಾಡಿರುವ ಕಿಡಿಗೇಡಿಗಳಿಂದ
ಹಲ್ಲರೆ ಗ್ರಾಮದಲ್ಲಿ ಸದ್ಯ ಪ್ರಕ್ಷುಬ್ಧ ವಾತಾವರಣ ನರ್ಮಾಣ ಉಂಟಾಗಿದೆ. ಕಳೆದ ವರ್ಷ ಅಂಬೇಡ್ಕರ್ ನಾಮಪಲಕ ಅಳವಡಿಸುವ ವಿಚಾರದಲ್ಲಿ ಉಂಟಾಗಿದ್ದ ಭಾರಿ ಗಲಾಟೆ.ಎರಡು ಕೋಮಿನ ನಡುವೆ ಗಲಾಟೆ ಘರ್ಷಣೆ ಹಾಗಿ ಮನೆ ಮನೆಗೆ ಕಲ್ಲು ಹೊಡೆದು ಮನೆಗಳ ಮೇಲ್ಚಾವಣಿ ಹಾಗೂ ನಲ್ಲಿಗಳನ್ನು ಧ್ವಂಸಗೊಳಿಸಲಾಗಿತ್ತು
ಸುಮಾರು 30ಕ್ಕೂ ಹೆಚ್ಚು ಜನರ ವಿರುದ್ದ ಪ್ರಕರಣ ಕೂಡ ದಾಖಲಾಗಿತ್ತು. ಬಳಿಕ ಶಾಸಕರುಗಳಾದ ದರ್ಶನ್ ದೃವನಾರಾಯಣ್ ಹಾಗೂ ಅನಿಲ್ ಚಿಕ್ಕಮಾಧು ನೇತೃತ್ವದಲ್ಲಿ ಸಂದಾನ ಸಭೆ ನೆಡೆಸಿ ಪೊಲೀಸ್ ಬಿಗಿ ಬ ಪೊಲೀಸ್ ಬಂದೋಬಸ್ತ್ ನಡುವೆ ಅಂಬೇಡ್ಕರ್ ರವರ ನಾಮಪಲಕ ಅಳವಡಿಸಿ ಎರಡು ಸಿ ಸಿ ಕ್ಯಾಮೆರಾ ಅಳವಡಿಸಿ ಕಣ್ಗಾವಲಿನಲ್ಲಿ ಇರಿಸಿದ್ದರು. ತಡರಾತ್ರಿ ವಿದ್ಯುತ್ ಇಲ್ಲದೆ ಸಂಧರ್ಭದಲ್ಲಿ ಸಿಸಿ ಕ್ಯಾಮರಾ ಕಾರ್ಯನಿರ್ವಹಿಸದ ಸಮಯ ನೋಡಿ ಅಂಬೇಡ್ಕರ್ ರವರ ನಾಮಫಲಕಕ್ಕೆ ಕಿಡಿಗೇಡಿಗಳು ಅಪಮಾನ ವೆಸಗಿದ್ದಾರೆ. ಇಡೀ ಗ್ರಾಮಸ್ಥರು ಸ್ಥಳದಲ್ಲಿ ಬುದುಬಿಟ್ಟಿದ್ದು ಕಿಡಿಗೇಡಿಗಳ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಬಂದಿಸಲು ಒತ್ತಾಯಿಸಿದ್ದಾರೆ.
ಹಲ್ಲರೆ ಗ್ರಾಮದಲ್ಲಿ ಈಗಾಗಲೇ ಪೊಲೀಸರು ಇಲಾಖೆ ಯಾವುದೇ ರೀತಿ ಗಲಾಟೆ ಘರ್ಷಣೆ ಆಗದ ರೀತಿ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದಾರೆ..