ಬೆಳಗಾವಿ : ಎಲೆಕೋಸು ಬೆಲೆ ದಿಢೀರ್ ಕುಸಿತ ಹಿನ್ನೆಲೆ ಕಷ್ಟಪಟ್ಟು ಬೆಳೆದ ಬೆಳೆಯನ್ನು ರೈತರೇ ನಾಶಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಘಟನೆ ನಡೆದಿದೆ.
ಕ್ಯಾಬೇಜ್ ಬೆಲೆ ಏಕಾಏಕಿ ಕುಸಿದಿದ್ದು, ಒಂದು ಕೆಜಿಗೆ 70 ರಿಂದ 80 ಪೈಸೆಗೆ ಮಾತ್ರ ಮಾರಾಟವಾಗುತ್ತಿದೆ. 10 ಕೆಜಿ ಬ್ಯಾಬೇಜ್ ಗೆ ಕೇವಲ 7ರೂ ಮಾತ್ರ ಸಿಗುತ್ತಿರುವುದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಅನಿವಾರ್ಯವಾಗಿ ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿ ಆಕ್ರೋಶ ಹೊರ ಹಾಕಿದ್ದಾರೆ.
ಕ್ಯಾಬೇಜ್ ಬೆಳೆಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ
ಕ್ಯಾಬೇಜ್ ದರ ಕುಸಿತ ಕಂಡ ಹಿನ್ನೆಲೆ ಮೊನ್ನೆಯಷ್ಟೇ ಡಿಸಿ ಕಚೇರಿ ಎದುರು ಕ್ಯಾಬೇಜ್ ಸುರಿದು ಪ್ರತಿಭಟನೆ ನಡೆಸಿದ್ದರು.