ಬೆಂಗಳೂರು:– ಸುಹಾಸ್ ಶೆಟ್ಟಿ ಕೊಲೆ ಕೇಸ್ ಗೆ ಸಂಬಧಪಟ್ಟಂತೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಇದು ತಾಜಾ ಉದಾಹರಣೆ ಎಂದು ಸದಾನಂದ ಗೌಡ ಹೇಳಿದ್ದಾರೆ.
2 ಲಕ್ಷ ಹಣದ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ ವ್ಯಕ್ತಿ
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಕೇಸ್ ಅನ್ನು ಎನ್‌ಐಎಗೆ ವಹಿಸಬೇಕು. ಇದೊಂದು ಟೋಟಲ್ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಹದಗೆಟ್ಟಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿ. ಒಂದೆರೆಡು ಕೇಸ್ ಅಲ್ಲ. ಬ್ಯಾಂಕ್ ದರೋಡೆ ಸೇರಿ ಅನೇಕ ಕೇಸ್ ಆಗಿವೆ. ಸರ್ಕಾರ ಕೊಲೆ ಮಾಡೋ ಇಂತಹವರಿಗೆ ಬೆಂಬಲ ಕೊಡುವ ರಾಜನೀತಿ ಮಾಡುತ್ತಿದೆ. ಹಿಂದೂಗಳನ್ನು ಎರಡನೇ ದರ್ಜೆ ರೀತಿ ನೋಡುತ್ತಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಯುದ್ಧ ಮಾಡಬೇಡಿ ಎನ್ನುತ್ತಾರೆ. ಇವತ್ತು ಹೋಗಿ ಗೃಹ ಸಚಿವರು ಸಭೆ ಮಾಡುತ್ತಿದ್ದಾರೆ. ಕೇವಲ ಮುಸ್ಲಿಂ ಸಂಘಟನೆಗಳನ್ನು ಕರೆದು ಸಭೆ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರನ್ನು ಕರೆದಿಲ್ಲ. ಇದು ಯಾವ ಸರ್ಕಾರದ ನೀತಿ ಎಂದು ಕಿಡಿಕಾರಿದರು.
ಸುಹಾಸ್ ಕೇಸ್‌ನಲ್ಲಿ 8 ಜನರ ಬಂಧನ ಆಗಿದೆ. ಆದರೆ ಅಶ್ರಫ್ ಕೊಲೆ ಕೇಸ್‌ನಲ್ಲಿ 25 ಜನ ಅರೆಸ್ಟ್ ಮಾಡ್ತಾರೆ. ಆದರೆ ಈ ಕೇಸ್ ನಲ್ಲಿ ಅಲ್ಲೇ 25 ಜನ ಇದ್ದರು,ಬುರ್ಕಾ ಹಾಕಿರೋ ವಿಡಿಯೋ ಇದ್ದರು ಅರೆಸ್ಟ್ ಆಗಿಲ್ಲ. ಈ ಸರ್ಕಾರ ಮೈನಾರಿಟಿ ಪರ ಅಂತ ತೋರಿಸಿಸೋಕೆ ಹೋಗ್ತಿದೆ.ಈ ಸರ್ಕಾರ ಈ ಕೇಸ್ ನಲ್ಲಿ ಏನು ಮಾಡೊಲ್ಲ. ಜನರು ಬೀದಿಗೆ ಇಳಿಯಬೇಕು. ಹೀಗಾಗಿ ಈ ಕೇಸ್ ಎನಐಎಗೆ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದರು