ಹುಬ್ಬಳ್ಳಿ: ಸುಹಾಸ್ ಶೆಟ್ಟಿ ಕೊಲೆಯಾದ ನಂತರ ಸಹ ರಾಜ್ಯ ಸರ್ಕಾರದ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ದುರ್ದೈವದ ಸಂಗತಿ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಕೊಲೆ, ಕೋಮು ಗಲಭೆ ಆರಂಭವಾಗಿವೆ. ಸುಹಾಸ್ ಶೆಟ್ಟಿ ಕೊಲೆಯೇ ಇದೊಂದು ಉದಾಹರಣೆ. ಇಷ್ಟೊಂದು ಘಟನೆ ಆದ ಬಳಿಕ ಸಹ ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತ ಹದಗೆಟ್ಟದೆ.. ಆಡಳಿತ ವ್ಯವಸ್ಥೆ ಸಹ ಹಾಳಾಗಿದೆ. ಸಿಎಂ ಸಿದ್ಧರಾಮಯ್ಯಾನವರ ಸಂಪೂರ್ಣ ವಿಫಲ ಆಗಿದೆ ಆರೋಪಿಸಿದರು
ಪಾಕಿಸ್ತಾನದ ಎದುರು ಯುದ್ಧಕ್ಕೆ ಹೋಗಲು ಸಿದ್ದ ; ಸಚಿವ ಜಮೀರ್ ಅಹಮ್ಮದ್ ಖಾನ್
ಇನ್ನೂ ಮುಸ್ಲಿಂ ತುಷ್ಟೀಕರಣ ಹೆಚ್ಚಾದ ಕಾರಣ ಹಾಡುಹಗಲೇ ಕೊಲೆ ಸುಲಿಗೆ ಆರಂಭ ಆಗಿವೆ. ಇಂದು ರಾಜ್ಯದಲ್ಲಿ ನಾವು ಏನು ಮಾಡಿದರು ನಡೆಯುತ್ತದೆ ಎಂಬ ನಿರ್ಧಾರ ಮುಸ್ಲಿಂರು ಬಂದಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಅಟ್ಯಾಕ್ ಪ್ರಕರಣ, ಡಿಜೆ ಹಳ್ಳಿ ಕೆಜೆ ಹಳ್ಳಿ, ಮೈಸೂರು, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಆದ ಪ್ರಕರಣದ ಕೇಸ್ ವಾಪಸು ಪಡೆಯಲಾಯಿತು. ರಾಜ್ಯ ಸರ್ಕಾರಕ್ಕೆ ನಾಚಿಕೆ ಇಲ್ಲ ಎಂದು ಕಿಡಿಕಾರಿದರು.
ಸುಹಾಸ್ ಶೆಟ್ಟಿ ಒಬ್ಬ ರೌಡಿ ಶೀಟರ್ ಇದ್ದಾನೆ ಅಂದರೆ ಕೊಲೆ ಮಾಡಬಹುದು. ಅಂತಹ ರೌಡಿ ಶೀಟರ್ ಗೆ ರಕ್ಷಣೆ ಬೇಡ್ವಾ…?ಎಂದು ಪ್ರಶ್ನಿಸಿದರು.