ರಾಯಚೂರು : ಸಿಂಧನೂರು ಸುಕಲಪೇಟೆಯ ಐವರ ಕೊಲೆ ಪ್ರಕರಣ ಸಂಬಂಧ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ, 9 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಸಿಂಧನೂರು 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ.ಜಕಾತಿ ಆದೇಶ ಹೊರಡಿಸಿದ್ದಾರೆ.
ಘಟನೆ ವಿವರ..?
ಮೌನೇಶ್ ಮತ್ತು ಮಂಜುಳಾ ಪ್ರೀತಿಸಿ ಮದುವೆಯಾಗಿದ್ದರು. ಇದೇ ವಿಚಾರಕ್ಕೆ ಮೌನೇಶ್ ತಂದೆ ಈರಪ್ಪ ಮತ್ತು ಮಂಜುಳಾ ತಂದೆ ಸಣ್ಣ ಫಕೀರಪ್ಪ ನಡುವೆ ಜಗಳ ನಡೆದಿತ್ತು. 2020ರ ಜುಲೈ 11ರಂದು ಮೌನೇಶ್ ತಂದೆ ಈರಪ್ಪ, ತಾಯಿ ಸುಮಿತ್ರಮ್ಮ, ಅಣ್ಣ ನಾಗರಾಜ್, ಹನುಮೇಶ್, ಸಹೋದರಿ ಶ್ರೀದೇವಿ ಕೊಲೆಯಾಗಿತ್ತು.
ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ತೀರ್ಪು ಇಂದು ಪ್ರಕಟಗೊಂಡಿದೆ. ಎ-1 ಆರೋಪಿ ಸಣ್ಣ ಫಕೀರಪ್ಪ, ಎ- 2 ಅಂಬಣ್ಣ, ಎ-3 ಸೋಮಶೇಖರ್‌ಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಎ- 4 ರೇಖಾ, ಎ-5 ಗಂಗಮ್ಮ, ಎ- 6 ದೊಡ್ಡ ಫಕೀರಪ್ಪ, ಎ-7 ಹನುಮಂತ, ಎ-8 ಹೊನ್ನೂರಪ್ಪ, ಎ-9 ಬಸಲಿಂಗಪ್ಪ, ಎ- 10 ಅಮರೇಶ್, ಎ- 11- ಶಿವರಾಜ್, ಎ- 12 ಪರಸಪ್ಪಗೆ ಜೀವಾವಧಿ ಜೊತೆಗೆ ದಂಡ ವಿಧಿಸಲಾಗಿದೆ.