ಬೆಂಗಳೂರು:- ಒಂದು ಕಡೆ ಬಿರು ಬಿಸಿಲು ಬೇಸಿಗೆ ಮತ್ತೊಂದು ಕಡೆ ಶಾಲಾ ಮಕ್ಕಳಿಗೆ ರಜೆ. ಇದನ್ನೇ ಗುರಿಯಾಗಿಸಿಕೊಂಡಿರುವ ಬಿಬಿಎಂಪಿ ಈಜುಕೊಳಗಳಲ್ಲೂ ಬೇಕಾ ಬಿಟ್ಟಿ ದರ ನಿಗದಿ ಮಾಡಿದೆ. ಮೊದಲೆಲ್ಲಾ ಚಿಕ್ಕಮಕ್ಕಳಿಗೆ 25 ರೂ. ದೊಡ್ಡವರಿಗೆ 30 ರೂ. ಇತ್ತು. ಈಗ ವಯಸ್ಕರಿಗೂ, ಚಿಕ್ಕಮಕ್ಕಳಿಗೂ 50 ರೂ. ನಿಗದಿಯಾಗಿದೆ ಬಿಬಿಎಂಪಿ ದರ ನಿಗದಿ ಮಾಡಿರುವುದು ಒಂದಾದರೆ, ಈಜುಕೊಳಗಳಲ್ಲಿ ಉಸ್ತುವಾರಿಗಳು ಮತ್ತೊಂದು ದರದಲ್ಲಿ ವಸೂಲಿ ಮಾಡುತ್ತಿದ್ದಾರೆ
ಚಿಕ್ಕ ಮಕ್ಕಳಿಗೂ ಒಂದೇ ದರ, ದೊಡ್ಡವರಿಗೆ ಒಂದೇ ದರ, ಹೇಳೋರಿಲ್ಲ ಕೇಳೋರಿಲ್ಲ. ಬೇಕಾಬಿಟ್ಟಿ ದರ ನಿಗದಿಗೆ ಇದೀಗ ಪೋಷಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಮಹಾಲಕ್ಷ್ಮೀ ಲೇಔಟ್‌ನ ಬಿಬಿಎಂಪಿ ಈಜುಕೊಳದಲ್ಲಿ 40 ನಿಮಿಷಕ್ಕೆ 50 ರೂ. ನಿಗದಿ ಮಾಡಿದ್ದಾರೆ. ಚಿಕ್ಕಮಕ್ಕಳಿಗೂ 50 ರೂ. ದೊಡ್ಡವರಿಗೂ 50 ರೂ. ಇದಕ್ಕೆ ಪೋಷಕರು ಮಕ್ಕಳಿಗೆ ದರ ಕಡಿಮೆ ಮಾಡಿ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಮಹಾಲಕ್ಷ್ಮೀ ಲೇಔಟ್‌ನಲ್ಲಿ ಎಲ್ಲರಿಗೂ 50 ರೂ. ನಿಗದಿ ಮಾಡಿದ್ದರು. ಆದರೆ ವಿಜಯನಗರದಲ್ಲಿ ಮಕ್ಕಳಿಗೆ 40 ರೂ. ದೊಡ್ಡವರಿಗೆ 50 ರೂ. ನಿಗದಿ ಮಾಡಿದ್ದಾರೆ. ಅಂದರೆ ಒಂದೊಂದು ಕಡೆ ಒಂದೊಂದು ರೀತಿ ದರ ನಿಗದಿ ಮಾಡಿರುವುದು ಕಂಡುಬರುತ್ತಿದೆ.
ಬೇಕಾಬಿಟ್ಟಿ ದರ ವಸೂಲಿ ಮಾಡೋದು, ಸಮ್ಮರ್ ಕ್ಯಾಂಪ್‌ಗಳಿಗೆ ಹಣ ವಸೂಲಿ ಮಾಡೋದು ಮಾಡಿದರೆ ಖಂಡಿತಾ ಕ್ರಮ ಆಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ