ಬೆಂಗಳೂರು:- ಇಡಿಯಿಂದ ಸಮನ್ಸ್ ಬಂದಿದೆ, ಅವರು ಹೇಳಿದ ದಿನ ವಿಚಾರಣೆಗೆ ಹೋಗಲು ಆಗಲ್ಲ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಚಿನ್ನಸ್ವಾಮಿ ದುರಂತ: ಸರ್ಕಾರದ ತನಿಖೆ ಮೇಲೆ ಯಾರಿಗೂ ನಂಬಿಕೆ ಇಲ್ಲ: ಅಶೋಕ್!
ನಗರದಲ್ಲಿ ಮಾತನಾಡಿದ ಅವರು,ಮಧ್ಯಾಹ್ನ 12:30ಕ್ಕೆ ಇಡಿಯವರು ಬಂದು ಸಮನ್ಸ್ ನೀಡಿದ್ದಾರೆ. ನಾನು ಹೊರಗೆ ಹೋಗಿದ್ದೆ. ಇಡಿಯವರು ಬಂದಿದ್ದಾರೆ ಎಂದು ಗೊತ್ತಾದ ಮೇಲೆ ಬಂದೆ ಅವರು ಸಮನ್ಸ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಐಶ್ವರ್ಯ ಗೌಡ ಪ್ರಕರಣದಲ್ಲಿ ಇಡಿ ಸಮನ್ಸ್ ಬಂದಿದ್ದು, ಗುರುವಾರ ವಿಚಾರಣೆಗೆ ಬರಲು ಹೇಳಿದ್ದಾರೆ. ಮಧ್ಯಾಹ್ನ 12:30ಕ್ಕೆ ಇಡಿಯವರು ಬಂದು ಸಮನ್ಸ್ ನೀಡಿದ್ದಾರೆ. ನಾನು ಹೊರಗೆ ಹೋಗಿದ್ದೆ. ಇಡಿಯವರು ಬಂದಿದ್ದಾರೆ ಎಂದು ಗೊತ್ತಾದ ಮೇಲೆ ಬಂದೆ ಅವರು ಸಮನ್ಸ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ
ಸಮನ್ಸ್ನಲ್ಲಿ ಯಾವ ಪ್ರಕರಣ ಅಂತ ಇಲ್ಲ. ಆದರೆ ದಾಖಲಾತಿ ನೋಡಿದಾಗ ಈ ಪ್ರಕರಣ ಅಂತ ಗೊತ್ತಾಯ್ತು. ಗುರುವಾರ ವಿಚಾರಣೆಗೆ ಬನ್ನಿ ಅಂದಿದ್ದಾರೆ. ಆದರೆ ಪೂರ್ವ ನಿಯೋಜಿತ ಕಾರ್ಯಕ್ರಮ ಇದೆ. ಅದಕ್ಕೆ ಸೋಮವಾರ ಬರುತ್ತೇನೆ ಎಂದು ಮೌಖಿಕವಾಗಿ ತಿಳಿಸಿದ್ದೇನೆ. ಈಗ ಮೇಲ್ ಮೂಲಕ ಅಧಿಕೃತವಾಗಿ ತಿಳಿಸುತ್ತಿದ್ದೇನೆ ಎಂದಿದ್ದಾರೆ.