ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ಗ ಪುತ್ರ ಪ್ರಣವ್ ಮೋಹನ್ ಲಾಲ್ ಹೃದಯಂ ಸಿನಿಮಾ ಮೂಲಕ ಸಿನಿಪ್ರೇಮಿಗಳಿಗೆ ಹತ್ತಿರ ಆದವರು. 2022ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ಭರ್ಜರಿ ಹಿಟ್ ಕಂಡಿತ್ತು. ಪ್ರಣವ್ ಗೆ ಹೃದಯಂ ಸಿನಿಮಾದಲ್ಲಿ ನಾಯಕಿಯಾಗಿ ಕಲ್ಯಾಣಿ ಪ್ರಿಯದರ್ಶನ್ ನಟಿಸಿದ್ದರು. ಆನ್ ಸ್ಕ್ರೀನ್ ನಲ್ಲಿ ಈ ಜೋಡಿಯ ಕೆಮಿಸ್ಟ್ರೀ ನೋಡಿ ಎಲ್ಲರು ಇಷ್ಟಪಟ್ಟಿದ್ದರು. ಈ ಚಿತ್ರದ ಸಕ್ಸಸ್ ಬಳಿಕ ಪ್ರಣವ್ ಪ್ರಿಯ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೀಗ ಹೊಸ ಸುದ್ದಿಯೊಂದು ಮಾಲಿವುಡ್ ಅಂಗಳದಲ್ಲಿ ಓಡಾಡ್ತಿದೆ. ಜರ್ಮನ್ ಹುಡ್ಗಿ ಜೊತೆ ಮೋಹನ್ ಲಾಲ್ ಪುತ್ರ ಡೇಟಿಂಗ್ ಮಾಡುತ್ತಿದ್ದಾರಂತೆ.
ಮೋಹನ್ ಲಾಲ್ ನಟನೆಯ ಬರೋಜ್ ಚಿತ್ರದ ಸೆಲೆಬ್ರಿಟಿ ಶೋನಲ್ಲಿ ಪ್ರಣವ್ ಮೋಹನ್ ಲಾಲ್ ಜೊತೆ ವಿದೇಶಿ ಹುಡ್ಗಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅವರ ಕುಟುಂಬದ ಕಾರ್ಯಕ್ರಮದಲ್ಲಿಯೂ ಅವರು ಭಾಗಿಯಾಗಿದ್ದಾರಂತೆ. ಹೀಗಾಗಿ ಜರ್ಮನ್ ಹುಡ್ಗಿಯೊಂದಿಗೆ ಮೋಹನ್ ಲಾಲ್ ಪುತ್ರ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ವೈಯಕ್ತಿಯ ವಿಚಾರ ಹಂಚಿಕೊಳ್ಳಲ್ಲವೆಂದಿದ್ದ ಪ್ರಣವ್
ಸೆಲೆಬ್ರಿಟಿಗಳ ಸಿನಿಮಾಗಳಿಗಿಂತ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಸಿಕ್ಕಾಪಟ್ಟೆ ಇರುತ್ತದೆ. ಆದರೆ ಪ್ರಣವ್ ಸಂದರ್ಶವೊಂದರಲ್ಲಿ ವೈಯಕ್ತಿಕ ಜೀವನವನ್ನು ಸಪರೇಟ್ ಆಗಿ ಇಡಲು ಬಯಸುತ್ತೇವೆ ಎಂದಿದ್ದರು.