ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ಯ ಎಮ್‌ಎಲ್‌ಸಿ ರವಿಕುಮಾರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂಬ ಆರೋಪ ಭಾರೀ ಚರ್ಚೆಗೆ ಗುರಿಯಾಗಿದೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಪಕ್ಷದ ಶಾಸಕ ಬಿ.ಸುರೇಶ್ ಗೌಡ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಮಹಿಳೆಯರಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣ ಈ ಮಾತ್ರೆ ; ಈ ಬಗ್ಗೆ ಇರಲಿ ಎಚ್ಚರ..
ರವಿಕುಮಾರ್ ಮಾತನಾಡಿದ್ದು ಸರಿಯಲ್ಲ. ಚಿಕ್ಕ ಗುಮಾಸ್ತನಾಗಲಿ ಗೌರವದಿಂದ ಕಾಣಬೇಕು. ಕೋಪದಲ್ಲಿ ಮಾತನಾಡಿ ಗೊಂದಲ ಮಾಡಿಕೊಳ್ಳಬಾರದು. ರವಿಕುಮಾರ್ ಮಾತನಾಡಿದರೆ ಅವರೇ ಸ್ಪಷ್ಟನೆ ಕೊಡಬೇಕು. ಅದನ್ನ ಬಿಜೆಪಿ ಹೇಳಿಕೊಟ್ಟು ಮಾತನಾಡಿಸಿದ್ದಲ್ಲ. ರವಿಕುಮಾರ್ ಹೇಳಿಕೆಯನ್ನ ಖಂಡಿಸುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಿದ್ದರಾಮಯ್ಯ ಡಿವೈಎಸ್‍ಪಿ ಮೇಲೆ ಕಪಾಳ ಮೋಕ್ಷ ಮಾಡಲು ಹೋಗಿದ್ದರು. ವೇದಿಕೆಯಲ್ಲಿ ಸ್ವಾಮೀಜಿ ಪಕ್ಕ ಕುಳಿತಿದ್ದ ಐಎಎಸ್ ಅಧಿಕಾರಿಯನ್ನ ಹೊರಗೆ ಕಳುಹಿಸಿದ್ರು ಎಂದು ಸಿಎಂ ವಿರುದ್ಧವು ಅಸಮಾಧಾನ ಹೊರಹಾಕಿದ್ದಾರೆ.