ಹಾಸನ:- ಹಾಸನ ನಗರದ ಚನ್ನಪಟ್ಟಣ ಬಡಾವಣೆಯಲ್ಲಿ ತಾಲೂಕು ಕಚೇರಿ ಸಿಬ್ಬಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜರುಗಿದೆ. 43 ವರ್ಷದ ಸತೀಶ್ ಮೃತ ವ್ಯಕ್ತಿ. ಹದಿನೈದು ವರ್ಷಗಳ ಹಿಂದೆ ಹಾಸನದ ವಿದ್ಯಾ ಎಂಬುವವರ ಜೊತೆ ಮದುವೆಯಾಗಿದ್ದರು.
ಎಚ್ಚರ ಜನರೇ| ನೀರಿಗೂ ಇದ್ಯಂತೆ ಎಕ್ಸ್‌ಪೈರ್ಡ್ ಡೇಟ್.. ಕುಡಿಯೋ ಮುನ್ನ ನೂರು ಬಾರಿ ಯೋಚಿಸಿ!
ಪತಿ-ಪತ್ನಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿದ್ದು ಹಲವು ಬಾರಿ ಕುಟುಂಬಸ್ಥರು ರಾಜೀ ಸಂಧಾನ ಮಾಡಿದ್ದರು. ಆದರೂ ಗಂಡ-ಹೆಂಡತಿ ನಡುವೆ ಜಗಳ, ವೈಮನಸ್ಸು ಸರಿಯಾಗಿರಲಿಲ್ಲ. ನಿನ್ನೆ ಬೆಳಗ್ಗೆ ಮನೆಯಲ್ಲೇ ಸತೀಶ್ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇನ್ನೂ ಪತ್ನಿ ಮತ್ತು ಅವರ ಕಡೆಯವರೇ ಸೇರಿ ನನ್ನ ಮಗನನ್ನ ಕೊಲೆ ಮಾಡಿದ್ದಾರೆ ಎಂದು ಮೃತ ಸತೀಶ್ ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನೂ ಪತ್ನಿ ಮತ್ತು ಅವರ ಕಡೆಯವರೇ ಸೇರಿ ನನ್ನ ಮಗನನ್ನ ಕೊಲೆ ಮಾಡಿದ್ದಾರೆ ಎಂದು ಮೃತ ಸತೀಶ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.