Close Menu
Ain Live News
    Facebook X (Twitter) Instagram YouTube
    Friday, June 27
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಬೆಂಗಳೂರು: ನೀರಿನ ಹೊಂಡಕ್ಕೆ ಬಿದ್ದ ಸ್ವಿಫ್ಟ್ ಕಾರು‌, ನಾಲ್ವರು ಸಾವು

    By AIN AuthorDecember 10, 2023
    Share
    Facebook Twitter LinkedIn Pinterest Email
    Demo

    ಬೆಂಗಳೂರು:- ರಾಷ್ಟ್ರೀಯ ಹೆದ್ದಾರಿ 44 ರ ರಸ್ತೆ ಬದಿಯಲ್ಲಿರುವ ಅಮಾನಿಗೋಪಾಲಕೃಷ್ಣ ಕೆರೆ ಹಿನ್ನೀರಿನ ಹೊಂಡದಲ್ಲಿ ಕಾರು ಮುಳುಗಿ ನಾಲ್ಕುಜನ ವಿದ್ಯಾರ್ಥಿಗಳು ಜಲಸಮಾಧಿಯಾಗಿರೋದು ಚಿಕ್ಕಬಳ್ಳಾಪುರದ ಬೈಪಾಸ್ ರಸ್ತೆಯಿಂದ ನಗರದ ಕೆಳಗಿನ ತೋಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿರುವ ಅಂಜನೇಯ ಸ್ವಾಮಿ ದೇವಾಲಯದ ಮುಂಬಾಗದಲ್ಲಿ

    ಹೌದು ನೆನ್ನೆ ಸಂಜೆ ಕಾಫಿ ಕುಡ್ಕೊಂಡು ಬರೋಣ ಅಂತ ಸ್ವಿಫ್ಟ್ ಕಾರಿನಲ್ಲಿ ಜಾಲಿ ರೈಡ್ ಗೆ ಹೋಗೋಣ ಅಂತ ನಾಲ್ಕು ಜನ ಸ್ನೇಹಿತರು ಹೊರಟಿದ್ದರು, ಜಾಲಿ ರೈಡ್ ವೇಳೆ ಅತಿವೇಗದಿಂದ ಚಲಾಯಿಸಿಕೊಂಡು ಬರುವಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ನೀರಿನ ಹೊಂಡಕ್ಕೆ ಹಾರಿಬಿದ್ದ ಕಾರು ನೀರಿನಲ್ಲಿ ಮುಳುಗಿದೆ. ಏನೋ ಸದ್ದು ಬಂತಲ್ಲ ಅಂತ ಹಿಂಬದಿಯಿಂದ ಬರುತ್ತಿದ್ದ ಆಂಬುಲೆನ್ಸ್ ಚಾಲಕ ಇಳಿದು ನೋಡಿದ್ದಾನೆ ಅಷ್ಟರಲ್ಲಿ ಕಾರು ನೀರಿನಲ್ಲಿ ಉಲ್ಟಾ ಮುಳುಗಿ ನಾಲ್ಕೂ ಜನ ಜಲಸಮಾಧಿಯಾಗಿದ್ರು. ತಕ್ಷಣ ಅಗ್ನಿಶಾಮಕದಳದ ಸಿಬ್ಬಂದಿ ಹಾಗು ಸ್ಥಳೀಯರು ಮುಳುಗಿದ್ದ ಕಾರನ್ನ ಕ್ರೇನ್ ಮೂಲಕ ಮೇಲಕ್ಕೆತ್ತಿದ್ದಾರೆ..

    ಇನ್ನು ಘಟನೆಯಲ್ಲಿ ಮೃತಪಟ್ಟವರೆಲ್ಲಾ ಯಲಹಂಕದ ಪ್ರತಿಷ್ಠಿತ ರೇವಾ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.. ಮೃತರನ್ನ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ 20 ವರ್ಷದ ಠ್ಯಾಗೂರ್ (20), ಚಿಕ್ಕಬಳ್ಳಾಪುರ ನಗರದ 19 ವರ್ಷದ ಆರ್ಯನ್, 20 ವರ್ಷದ ವಸಂತ್ ಮತ್ತು 18 ವರ್ಷದ ಪವನ್ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಹೆದ್ದಾರಿಯ 44ರ ಘಟನಾ ಸ್ಥಳದಲ್ಲಿ ಯಾವುದೇ ತಡೆಗೋಡೆ ಇಲ್ಲದೇ ಇರೋದು ಹಾಗೂ ಯಾವುದೇ ಸೂಚನಾ ಫಲಕಗಳು ಅಳವಡಿಸದೇ ಇರೋದೇ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಅವೈಜ್ಞಾನಿಕವಾಗಿ ಹೆದ್ದಾರಿ ಕಾಮಗಾರಿ ನಡೆಸಿದ್ದು, ಇಂತಹ ಅವೈಜ್ಞಾನಿಕ ಕಾಮಗಾರಿಯಿಂದ ಇನ್ನೂ ಅದೆಷ್ಟು ಜನ ಪ್ರಾಣ ಕಳೆದುಕೊಳ್ಳಬೇಕು? ಘಟನೆಗೆ ಹೊಣೆ ಯಾರು ಅಂತ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ..

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಪದೇ ಪದೇ ಅಪಘಾತಗಳಾಗುತ್ತಿದ್ದರೂ ಸಂಬಂದಪಟ್ಟ ಅಧಿಕಾರಿಗಳು ಮಾತ್ರ ಗಾಢ ನಿದ್ರೆಗೆ ಜಾರಿರೋದು ದುರಂತವೇ ಸರಿ.

    Demo
    Share. Facebook Twitter LinkedIn Email WhatsApp

    Related Posts

    ಕೃಷಿ ಸಚಿವ ಚಲುವರಾಯಸ್ವಾಮಿ ಕಾನೂನು ಸಮರಕ್ಕೆ ಜಯ: ಕ್ಷಮೆಯಾಚಿಸಿದ ಮಾಜಿ ಶಾಸಕ ಸುರೇಶ್ ಗೌಡ

    June 27, 2025

    ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಸಿಎಂ ಸಿದ್ದರಾಮಯ್ಯ

    June 27, 2025

    ಅಸಮಾಧಾನಗೊಂಡ ಶಾಸಕರನ್ನು ಮುಖ್ಯಮಂತ್ರಿಯವರು ಸಮಾಧಾನ ಮಾಡುತ್ತಾರೆ: ಡಿ.ಕೆ.ಸುರೇಶ್

    June 27, 2025

    ಸಿಎಂ ಆಪ್ತರೇ ಕ್ರಾಂತಿ ಆಗುತ್ತದೆ ಎಂದು ಹೇಳಿದ್ದಾರೆ, ನೀವು ಅವರನ್ನೇ ಕೇಳಬೇಕು: ಹೆಚ್.ಡಿ. ಕುಮಾರಸ್ವಾಮಿ

    June 27, 2025

    ಸಿಎಂ ಸ್ವಲ್ಪ ಸಾಫ್ಟ್ ಆಗಿರಬಹುದು. ಅವರು ಎಲ್ಲಿಯೂ ಗ್ರಿಪ್ ಕಳೆದುಕೊಂಡಿಲ್ಲ: ಸಚಿವ ಜಿ. ಪರಮೇಶ್ವರ್

    June 27, 2025

    ಐ ಆಮ್ ನಾಟ್ ಎ ಜರ್ನಲಿಸ್ಟ್: ಮಾಧ್ಯಮಗಳ ಮೇಲೆಯೇ ಗರಂ ಆದ ಸಿಎಂ ಸಿದ್ದರಾಮಯ್ಯ!

    June 27, 2025

    ಇಂದು ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ: ಪ್ರಶಸ್ತಿ ಪ್ರದಾನ, ಅನೇಕ ಕಾರ್ಯಕ್ರಮಗಳ ಆಯೋಜನೆ!

    June 27, 2025

    ಇಂದಿನಿಂದ ಜುಲೈ 3 ರವರೆಗೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ: ಇಲ್ಲೆಲ್ಲಾ ರೆಡ್, ಯೆಲ್ಲೋ ಅಲರ್ಟ್ ಘೋಷಣೆ!

    June 27, 2025

    ಧಾರಕಾರ ಮಳೆ: ಇಂದು ಕೊಡಗು ಜಿಲ್ಲೆಯಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆ!

    June 27, 2025

    UPI ಬಳಕೆದಾರರಿಗೆ ಗಮನಿಸಿ: ಜುಲೈ 15 ರಿಂದ ಜಾರಿಗೆ ಬರಲಿದೆ ಹೊಸ ನಿಯಮಗಳು!

    June 27, 2025

    Friday Tips: ಶುಕ್ರವಾರ ಈ ಒಂದು ಕೆಲಸ ಮಾಡಿದ್ರೆ ಸಾಕು ಬೇಡ ಬೇಡ ಎಂದರೂ ಹಣ ಬರುತ್ತೆ.!

    June 27, 2025

    ಹಲಸಿನಹಣ್ಣು ಕದಿಯಲು ಬಂದು ಕಳ್ಳನ ಪೇಚಾಟ: ಮರದಲ್ಲಿ ನೇತಾಡಿದ ವ್ಯಕ್ತಿ.. ಅಷ್ಟಕ್ಕೂ ಆಗಿದ್ದೇನು?

    June 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.