ಪ್ರಯಾಗ್‌ರಾಜ್: ವಿಶ್ವದ ಉದ್ದಗಲಕ್ಕೂ ಇರುವ ಆಸ್ತಿಕ ಶ್ರದ್ದಾಳುಗಳು, ಹಿಂದೂಗಳು, ಪ್ರವಾಸಿಗರು, ಕುತೂಹಲಿಗಳು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ. ಈ ನಡುವೆ, ಇನ್ನೂ ಅನೇಕರಿಗೆ ಮಹಾಕುಂಭ ಮೇಳಕ್ಕೆ ನಾನಾ ಕಾರಣಗಳಿಂದಾಗಿ ಹೋಗುವುದು ಸಾಧ್ಯವಾಗಿಲ್ಲ, ಸಾಧ್ಯವಾಗುವುದಿಲ್ಲ. ನಿತ್ಯವೂ ಕೋಟ್ಯಂತರ ಜನರು ಮಹಾಕುಂಭ ಮೇಳಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡುತ್ತಿದ್ದು, ವಿಮಾನ, ರೈಲು, ಬಸ್ ಪ್ರಯಾಣ ದುಬಾರಿಯಾಗಿದೆ. ಜನದಟ್ಟಣೆಯೂ ಹೆಚ್ಚಾಗಿದೆ.
ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್ಮೇಲ್: ನಕಲಿ ಲೋಕಾ ಅಧಿಕಾರಿ ಅರೆಸ್ಟ್!
ಇನ್ನೂ ಮಹಾ ಕುಂಭಮೇಳದಲ್ಲಿ 60 ಕೋಟಿಗೂ ಹೆಚ್ಚು ಜನ ಪುಣ್ಯ ಸ್ನಾನ ಮಾಡಿದ್ದಾರೆ. ಆದರೆ ಹಲವರು ಕುಂಭ ಸ್ನಾನದಿಂದ ವಂಚಿತರಾಗಿದ್ದು, ಅಂಥವರಿಗಾಗಿ ವ್ಯಕ್ತಿಯೊಬ್ಬ ಡಿಜಿಟಲ್ ಸ್ನಾನ ಎನ್ನುವ ಹೊಸ ಐಡಿಯಾ ಪರಿಚಯಿಸಿದ್ದಾರೆ. ನೀವು ₹1100 ಕೊಟ್ಟು ವಾಟ್ಸಾಪ್ ಮೂಲಕ ಫೋಟೊ ಕಳುಹಿಸಿದರೆ ಈ ವ್ಯಕ್ತಿ ಅದರ ಪ್ರಿಂಟ್ ತೆಗೆದು ತ್ರಿವೇಣಿ ಸಂಗಮದಲ್ಲಿ ಭಾವಚಿತ್ರವನ್ನು ಮುಳುಗಿಸಿ ಪವಿತ್ರ ಸ್ನಾನ ಮಾಡಿಸುತ್ತಾನಂತೆ. ಪ್ರಯಾಗ್ ಎಂಟರ್‌ಪ್ರೈಸೆಸ್ ಹೆಸರಿನ ಇದು ತನ್ನ ಹೊಸ ಸ್ಟಾರ್ಟಪ್ ಅಂತ ಕೂಡ ಹೇಳಿಕೊಂಡಿದ್ದಾನೆ.
ಕುಂಭಮೇಳದಲ್ಲಿ ವ್ಯಕ್ತಿಯೊಬ್ಬರು ‘ಡಿಜಿಟಲ್ ಫೋಟೋ ಸ್ನಾನ’ ಸೇವೆಯನ್ನು ನೀಡುತ್ತಿರುವ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಾಟ್ಸಪ್‌ನಲ್ಲಿ ಫೋಟೋ ಕಳಿಸಿ, ಅದನ್ನು ಪ್ರಿಂಟ್ ತೆಗೆದು ಫೋಟೋಗೆ ತ್ರಿವೇಣಿ ಸಂಗಮದ ನೀರಿನಲ್ಲಿ ಅಮೃತಸ್ನಾನ ಮಾಡಿಸಲಾಗುವುದು. ಮಹಾಕುಂಭಕ್ಕೆ ಬರಲಾಗದವರಿಗೆ ವ್ಯವಸ್ಥೆ ಎಂದು ಪ್ರಯಾಗ್ ಎಂಟರ್‌ಪ್ರೈಸಸ್ ಮಾಲೀಕ ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾ ಕುಂಭಮೇಳಕ್ಕೆ ಪ್ರಯಾಗ್‌ರಾಜ್‌ನಲ್ಲಿ ಜ.13 ರಂದು ಚಾಲನೆ ಸಿಕ್ಕಿತು. ಫೆ.26 ರಂದು ಕುಂಭಮೇಳಕ್ಕೆ ತೆರೆ ಬೀಳಲಿದೆ.
144 ವರ್ಷಗಳ ನಂತರ ನಡೆಯುತ್ತಿರುವ 45 ದಿನಗಳ ಮಹಾ ಕುಂಭಮೇಳಕ್ಕೆ ಕೋಟ್ಯಂತರ ಭಕ್ತರು ಹರಿದುಬರುತ್ತಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ.