ಬೆಂಗಳೂರು: ಕಮಲ್ ಹಾಸನ್ ಕನ್ನಡ ವಿವಾದವೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದ್ದು ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿರುವ ಕಮಲ್ ಹಾಸನ್ ಕ್ಷಮೆ ಕನ್ನಡಿಗರು ಪಟ್ಟು ಹಿಡಿದಿದ್ದಾರೆ.
ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ತಮ್ಮದೇ ಥಗ್ ಲೈಫ್ ಸಿನಿಮಾ ಆಡಿಯೋ ಲಾಂಚ್ ವೇಳೆ, ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ಕೊಟ್ಟಿದ್ದರು. ಈ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಶಿವಣ್ಣ ಭಾಗಿಯಾಗಿದ್ದರು. ಶಿವಣ್ಣನ ಮುಂದೆ ಕಮಲ್ ಈ ರೀತಿ ಹೇಳಿದ್ದು ಕನ್ನಡಿಗರನ್ನು ಕೆರಳಿಸಿದೆ.
ಕಮಲ್ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಕ್ಷಮೆ ಯಾಚಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ಮಾಡಿವೆ. ಪ್ರವೀಣ್ ಶೆಟ್ಟಿ ಕರವೇ ಬಣ ಹಾಗೂ ಡಾ.ರಾಜ್ ಕುಮಾರ್ ಅಭಿಮಾನಿಗಳಿಂದ ಪ್ರತಿಭಟನೆ ನಡೆಸಲಾಗಿದೆ. ಕಮಲ್ ಹಾಸನ್ ಗೆ ಧಿಕ್ಕಾರ ಕೂಗುತ್ತ ಕನ್ನಡ ಪರ ಹೋರಾಟಗಾರರು ಆಕ್ರೋಶ ಹೊರ ಹಾಕಿದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳಬೇಕು ಇಲ್ಲ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಕಮಲ್ ಹಾಸನ್ ವಿರುದ್ದ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ.
ಪ್ರವೀಣ್ ರಿಯಾಕ್ಷನ್!
ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ ಬಳಿಕ ಮಾತನಾಡಿರುವ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಶಿವರಾಜ್ ಕುಮಾರ್ ಅವರ ಮುಂದೆಯೇ ಈ ಮಾತನ್ನು ಹೇಳಿದ್ದು ಸರಿಯಿಲ್ಲ. ಶಿವಣ್ಣ ಕಮಲ್ ಹಾಸನ್ ಗೆ ತಂದೆ ಸ್ಥಾನ ಕೊಟ್ಟರೆ ಅವರು ಈ ರೀತಿ ಹೇಳಿದ್ರೆ ಹೇಗೆ..? ಅವರ ಸಾಂಸಾರಿಕ ಜೀವನ ಸರಿಯಿಲ್ಲ, ರಾಜಕೀಯ ಜೀವನ ಎಕ್ಕುಟ್ಟೋಗಿದೆ. ರಾಜ್ಯ ಸರ್ಕಾರ , ಕಲಾವಿದರ ಸಂಘ ಸುಮ್ಮನೆ ಕೂರಬಾರದು. ಒಂದು ವೇಳೆ ಈ ವಿಚಾರಚಾಗಿ ಬೇಷರತ್ತಾಗಿ ಕ್ಷಮೆ ಕೇಳಬೇಕು. ಇಲ್ಲವಾದರೆ ಅವರ ಥಗ್ ಲೈಫ್ ಸಿನಿಮಾವನ್ನು ರಿಲೀಸ್ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.