ಪ್ರೀತಿ-ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ ಅಂತಾರೇ. ಆದರೆ ಮದುವೆ ಹಾಗೂ ಮಕ್ಕಳು ಅನ್ನೋದು ಸರಿಯಾದ ಸಮಯಕ್ಕೆ ಆಗಬೇಕು ಅನ್ನೋದು ದೊಡ್ಡವರ ವಾದ. 46ನೇ ವಯಸ್ಸಿಗೆ ಮದುವೆಯಾಗಿ ಸುದ್ದಿಯಾಗಿದ್ದ ತಮಿಳಿನ ಖ್ಯಾತ ಹಾಸ್ಯ ನಟ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಮಿಳಿನ ಡಾಕ್ಟರ್, ಬೀಸ್ಟ್, ಜೈಲರ್ ಸಿನಿಮಾದ ಸ್ಟಾರ್ ಕಾಮೆಡಿಯನ್ ರೆಡಿನ್ ಕಿಂಗ್ಸ್ ಲೇ ಮನೆಗೆ ಹೊಸ ಅಥಿತಿ ಆಗಮಿಸಿದ್ದಾರೆ. ರೆಡಿನ್ ಈಗ ತಂದೆಯಾಗಿ ಬಡ್ತಿ ಪಡೆದಿದ್ದಾರೆ.
ತಮಿಳಿನ ಜನಪ್ರಿಯ ಟಿವಿತಾರೆ ಸಂಗೀತ ಅವರನ್ನು ವರಿಸಿದ್ದ ರೆಡಿನ್ ಕಿಂಗ್ಸ್ ಲೇ ಚೊಚ್ಚಲ ಮಗುವನ್ನು ಸ್ವಾಗತಿಸಿದ್ದಾರೆ. 47ನೇ ವಯಸ್ಸಿಗೆ ಅಪ್ಪನಾಗಿರುವ ರೆಡಿನ್ ಕಿಂಗ್ಸ್ ಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ತಮ್ಮ ಮುದ್ದಾದ ಹೆಣ್ಣು ಮಗುವನ್ನು ತೋಳುಗಳಲ್ಲಿ ಮಲಗಿಸಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದು, ಫ್ಯಾನ್ಸ್ ವಾವ್, ಮನೆಗೆ ರಾಜಕುಮಾರಿ ಆಗಮನ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.
90 ರ ದಶಕದಿಂದಲೂ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ರೆಡಿನ್ ಕಿಂಗ್ಸ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡ್ತಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿ ರೆಡಿನ್ ಜನಪ್ರಿಯರಾಗಿದ್ದಾರೆ. ಇವರ ತಮ್ಮ ಕಾಮಿಡಿ ಸೆನ್ಸ್ ನಿಂದಲೇ ಸಿನಿಪ್ರೇಮಿಗಳಿಗೆ ಸಾಕಷ್ಟು ಇಷ್ಟವಾಗುತ್ತಾರೆ.