ತಮಿಳುನಟ ನಟ ವಿಶಾಲ್ ವೇದಿಕೆಯ ಮೇಲೆ ಕುಸಿದು ಬಿದ್ದ ಘಟನೆ ನಡೆದಿ. ನಿನ್ನೆ ವಿಲ್ಲುಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಶಾಲ್ ಕುಸಿದು ಬಿದ್ದಾರೆ. ಅವರನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯದು ಚಿಕಿತ್ಸೆ ನೀಡಲಾಗಿದೆ.
View this post on Instagram
ನಟ ವಿಶಾಲ್ ಆರೋಗ್ಯದ ಕುರಿತು ಅವರ ಮ್ಯಾನೇಜರ್ ಹರಿ ಪ್ರತಿಕ್ರಿಯೆಯನ್ನು ನೀಡಿದ್ದು, ಭಾನುವಾರ ಮಧ್ಯಾಹ್ನ ವಿಶಾಲ್ ಊಟ ಮಾಡಿರಲಿಲ್ಲ ಕೇವಲ ಜ್ಯೂಸ್ ಮಾತ್ರ ಕುಡಿದಿದ್ದರು, ಇದರಿಂದ ಆಯಾಸಗೊಂಡು ಅವರು ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆಯನ್ನು ನೀಡಿದ್ದಾರೆ, ಸದ್ಯ ವಿಶಾಲ್ ಆರೋಗ್ಯವಾಗಿದ್ದು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.
ವಿಶಾಲ್ ಆರೋಗ್ಯಕ್ಕೆ ಏನಾಗಿದೆ?
ಜನವರಿ ತಿಂಗಳಲ್ಲಿ ನಡೆದ ‘ಮದಗಜರಾಜ’ ಚಿತ್ರದ ಪ್ರಚಾರ ಕಾರ್ಯದಲ್ಲಿ ವಿಶಾಲ್ ಅವರನ್ನು ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ವಿಶಾಲ್ ಮಾತನಾಡುವಾಗ ತೊದಲಿದ್ದಾರೆ, ಕೈ ನಡುಗುತ್ತಿದೆ ಇದನ್ನು ವಿಶಾಲ್ ಕಂಡು ಫ್ಯಾನ್ಸ್ ಆಘಾತಗೊಂಡಿದ್ದರು. ಬಳಿಕ ವೈರಲ್ ಫೀವರ್‌ನಿಂದ ಆ ರೀತಿ ಆಗಿದೆ ಎಂದು ಕುಟುಂಬ ಮೂಲಗಳು ತಿಳಿಸಿದ್ದವು.
ದೈವದ ಮೊರೆ ಹೋಗಿದ್ದ ವಿಶಾಲ್
ವಿಶಾಲ್ ಆರೋಗ್ಯ ಚೇತರಿಸಿಕೊಂಡ ಬಳಿಕ ವಿಶಾಲ್ ತುಳುನಾಡಿನ ನೇಮೋತ್ಸವದಲ್ಲಿ ಭಾಗಿಯಾಗಿದ್ದರು. ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯ ವಾರ್ಷಿಕ ನೇಮ ನಡೆದಿದ್ದು, ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ಜಾರಂದಾಯ ನೇಮವನ್ನು ನೋಡಿದ್ದಾರೆ.