ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.ಜನರು ಉತ್ತಮ ಬ್ಯಾಟರಿ ಬಾಳಿಕೆ ಹೊಂದಿರುವ ಸ್ಮಾರ್ಟ್ಫೋನ್ ಗಳನ್ನೇ ಖರೀದಿಸಲು ಇಷ್ಟಪಡುತ್ತಾರೆ. ಫೋನಿನ ಬ್ಯಾಟರಿ ಬಾಳಿಕೆ ಚೆನ್ನಾಗಿ ಇದ್ದರೆ ಅದನ್ನು ದೀರ್ಘಕಾಲದವರೆಗೆ ಬಳಸಬಹುದು. ಫೋನ್ ಅನ್ನು ಪದೇ ಪದೇ ಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ.ಆದರೆ ಕೆಲವು ಸೆಟ್ಟಿಂಗ್ಗಳನ್ನು ಬದಲಾಯಿಸುವ ಮೂಲಕ ನಿಮ್ಮ ಸ್ಮಾರ್ಟ್ಫೋನ್ನ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು.
ಎಂಪುರಾನ್ ವಿವಾದ…ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ಗೆ ಐಟಿ ನೋಟಿಸ್!!
ಫೋನ್ನ ಬ್ಯಾಟರಿಯ ತ್ವರಿತ ಡಿಸ್ಚಾರ್ಜ್ಗೆ ಅನೇಕ ಇತರ ತಾಂತ್ರಿಕ ಕಾರಣಗಳು ಇರಬಹುದು. ಇದನ್ನು ಜನರು ಸಾಮಾನ್ಯವಾಗಿ ನಿರ್ಲಕ್ಷಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಫೋನ್ಗೆ ಹೊಸ ಬ್ಯಾಟರಿಯನ್ನು ಖರೀದಿಸಬೇಕು ಅಥವಾ ಹೊಸ ಫೋನ್ ಖರೀದಿಸಲು ಮುಂದಾಗುತ್ತಾರೆ. ಆದಾಗ್ಯೂ, ನೀವು ಈ 5 ವೈಶಿಷ್ಟ್ಯಗಳನ್ನು ಆಫ್ ಮಾಡಿದರೆ, ನಿಮ್ಮ ಫೋನ್ನ ಬ್ಯಾಟರಿ ಬಾಳಿಕೆ ಹೆಚ್ಚಾಗುತ್ತದೆ.
ಡಿಸ್ಪ್ಲೇ ಬ್ರೈಟ್ನೆಸ್:
ಬ್ಯಾಟರಿ ತ್ವರಿತವಾಗಿ ಖಾಲಿಯಾಗಲು ಡಿಸ್ಪ್ಲೇ ಮುಖ್ಯ ಕಾರಣವಾಗಿದೆ. ಇದಕ್ಕಾಗಿ, ನಿಮ್ಮ ಕಣ್ಣುಗಳಿಗೆ ಸರಿಹೊಂದುವ ರೀತಿಯಲ್ಲಿ ಡಿಸ್ಪ್ಲೇ ಬ್ರೈಟ್ನೆಸ್ ಅನ್ನು ಹೊಂದಿಸಿ. ಫೋನ್ನ ಬ್ರೈಟ್ನೆಸ್ ಅನ್ನು ಅನಗತ್ಯವಾಗಿ ಹೆಚ್ಚು ಇಡಬಾರದು. ಅಟೋ-ಲಾಕ್ ಅಥವಾ ಸ್ಕ್ರೀನ್ ಟೈಮ್ಔಟ್ ಸೆಟ್ಟಿಂಗ್ಗಳನ್ನು ಬದಲಾಯಿಸಿ. ಇದು ನಿಮ್ಮ ಫೋನ್ನ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು.
ಬ್ಯಾಕ್ಗ್ರೌಂಡ್ ಆ್ಯಪ್ ಕ್ಲೋಸ್ ಮಾಡಿ:
ಬ್ಯಾಕ್ಗ್ರೌಂಡ್ ಅಪ್ಲಿಕೇಶನ್ಗಳು ಹೆಚ್ಚಾಗಿ ಫೋನ್ಗಳಲ್ಲಿ ರನ್ ಆಗುತ್ತಲೇ ಇರುತ್ತವೆ. ಇದು ನಿಮ್ಮ ಫೋನ್ನ ಬ್ಯಾಟರಿಯನ್ನು ಖಾಲಿ ಮಾಡುತ್ತದೆ. ಅಂತಹ ಹಿನ್ನೆಲೆ ಅಪ್ಲಿಕೇಶನ್ಗಳನ್ನು ಕ್ಲೋಸ್ ಮಾಡಿ. ಅಲ್ಲದೇ ನಿರಂತರವಾಗಿ ಅಪ್ ಡೇಟ್ ಆಗುವ ಆ್ಯಪ್ ಗಳನ್ನು ಬ್ಲಾಕ್ ಮಾಡಬೇಕು. ಇದಕ್ಕಾಗಿ “ಸೆಟ್ಟಿಂಗ್ಗಳು” ಗೆ ಹೋಗಿ, ತದನಂತರ “ಜೆನೆರಲ್” ಆಯ್ಕೆಮಾಡಿ ಮತ್ತು ನಂತರ ” ಬ್ಯಾಕ್ಗ್ರೌಂಡ್ ಅಪ್ಲಿಕೇಶನ್ ರಿಫ್ರೆಶ್” ಅನ್ನು ಟ್ಯಾಪ್ ಮಾಡಿ
ಲೊಕೇಷನ್ ಆಫ್ ಮಾಡಿ:
ಲೊಕೇಷನ್ ನಿಮ್ಮ ಐಫೋನ್ನ ಬ್ಯಾಟರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿ ಅಪ್ಲಿಕೇಶನ್ಗೆ ಲೊಕೇಷನ್ ಶೇರ್ ಆಯ್ಕೆ ಕೊಡಬೇಡಿ. ಇದನ್ನು ನಿಲ್ಲಿಸಲು, “ಸೆಟ್ಟಿಂಗ್ಸ್ಗೆ” ಗೆ ಹೋಗಿ, “ಪ್ರೈವಸಿ” ಟ್ಯಾಪ್ ಮಾಡಿ, ನಂತರ “ಲೊಕೇಷನ್ ಸರ್ವಿಸ್” ಟ್ಯಾಪ್ ಮಾಡಿ. “ಆಲ್ವೇಸ್” ಬದಲಿಗೆ “ಯೂಸಿಂಗ್ ದಿಸ್ ಆ್ಯಪ್” ಆಯ್ಕೆಯನ್ನು ಆಯ್ಕೆಮಾಡಿ.
ಸೆಲ್ಯುಲಾರ್ ಬದಲಿಗೆ ವೈ-ಫೈ ಆಯ್ಕೆಮಾಡಿ:
ಬಳಕೆದಾರರು ಸೆಲ್ಯುಲಾರ್ ಡೇಟಾದ ಬದಲಿಗೆ ವೈ-ಫೈ ಆಯ್ಕೆಯನ್ನು ಆರಿಸಬೇಕು. ಸೆಲ್ಯುಲಾರ್ ನೆಟ್ವರ್ಕ್ಗಳು ಹೆಚ್ಚಿನ ಶಕ್ತಿಯನ್ನು ಬಳಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಬ್ಯಾಟರಿ ಬೇಗನೆ ಖಾಲಿಯಾಗುವ ಅಪಾಯವಿದೆ. ಇದಕ್ಕಾಗಿ ಬಳಕೆದಾರರು ವೈ-ಫೈ ಲಭ್ಯವಿದ್ದಲ್ಲೆಲ್ಲ ಅದನ್ನು ಬಳಸಬೇಕು. ಇದು ಫೋನ್ನ ಬ್ಯಾಟರಿ ಅವಧಿಯನ್ನು