ಬೆಂಗಳೂರು:- ತಾಂತ್ರಿಕ ದೋಷದಿಂದ ಇಂದು ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯ ಆಗಿದೆ. ಪ್ರಯಾಣಿಕರು ಸಹಕರಿಸಬೇಕೆಂದು BMRCL ಮನವಿ ಮಾಡಿದೆ.
BMRCL ಪ್ರಕಟಣೆಯಲ್ಲಿ ಏನಿದೆ?
ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ತೊಂದರೆ ಉಂಟಾಗಿದೆ. ಆದ್ದರಿಂದ, 23.05.2025 ರಂದು ಬೆಳಿಗ್ಗೆ 5.00 ಗಂಟೆಯಿಂದ ಈ ನಿಲ್ದಾಣದಿಂದ ರೈಲುಗಳು ಕಾರ್ಯನಿರ್ವಹಿಸುವುದಿಲ್ಲ. ತೊಂದರೆ ಸರಿಪಡಿಸುವವರೆಗೆ ರೈಲು ಸಂಚಾರ ಇರುವುದಿಲ್ಲ.
ಬದಲಾಗಿ ರೈಲುಗಳು ಉಜ್ವಲ ಮೆಟ್ರೋ ನಿಲ್ದಾಣದಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ನೇರಳೆ ಮಾರ್ಗದಲ್ಲಿ ಚಲಿಸುತ್ತವೆ”. ನೇರಳೆ ಮಾರ್ಗದಲ್ಲಿ ಮಾತ್ರ ಈ ಬದಲಾವಣೆ ಇರುತ್ತದೆ. ಹಸಿರು ಮಾರ್ಗದಲ್ಲಿ ಎಂದಿನಂತೆ ರೈಲು ಸೇವೆಗಳು ಲಭ್ಯವಿರುತ್ತವೆ. “ಸಾಮಾನ್ಯ ಸೇವೆಗಳು ಹಸಿರು ಮಾರ್ಗದಲ್ಲಿ ಇರುತ್ತವೆ”.
ಈ ತೊಂದರೆಯಿಂದ ಉಂಟಾದ ಅನಾನುಕೂಲಕ್ಕೆ ನಾವು ವಿಷಾದಿಸುತ್ತೇವೆ ಎಂದು ಬಿಎಂಆರ್‌ಸಿಎಲ್ ಪ್ರಕಟಿಸಿದೆ.