ವಾಷಿಂಗ್ಟನ್: ಪಹಲ್ಗಾಮ್ನಲ್ಲಿ ರಕ್ತದೋಕುಳಿ ಹರಿಸಿರೋ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳೋದಕ್ಕೆ ಭಾರತೀಯ ಸೇನೆ ಮುಂದಾಗಿದೆ. ಉಗ್ರರನ್ನ ಸದೆಬಡೆಯೋದಕ್ಕೆ ಕೇಂದ್ರ ಸರ್ಕಾರ ತಂತ್ರ ರೂಪಿಸ್ತಿದೆ. ಇನ್ನು ಇದರ ನಡುವೆ ನಾನು ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಕ್ಕೂ ಆಪ್ತನಾಗಿದ್ದೇನೆ.
ಈ ಎರಡೂ ದೇಶಗಳ ನಡುವೆ ದಶಕಗಳಿಂದಲೂ ಉದ್ವಿಗ್ನತೆ ಇದೆ. ಈ ಉದ್ವಿಗ್ನತೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಅವರು ಬಗೆಹರಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದರು. ಪಹಲ್ಗಾಮ್ ಉಗ್ರರ ದಾಳಿಯ ವಿಚಾರವಾಗಿ, ಇದು ತುಂಬಾ ಭೀಕರ ದಾಳಿಯಾಗಿದೆ. ಇಂತಹ ಉದ್ವಿಗ್ನ ಪರಿಸ್ಥಿತಿ ಭಾರತ ಪಾಕ್ ನಡುವೆ ಹಲವಾರು ವರ್ಷಗಳಿಂದಲೂ ಇದೆ. ಎರಡೂ ದೇಶಗಳು ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳುತ್ತಾರೆ ಎಂದಿದ್ದಾರೆ.
ಮಂಗಳವಾರ ಪಹಲ್ಗಾಮ್ ಬಳಿಯ ಬೈಸರನ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆ ಸಾವನ್ನಪ್ಪಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿದೆ.