ಬಾಗಲಕೋಟೆ : ಕರ್ನಾಟಕ ರಾಜ್ಯದಲ್ಲಿ ಉಗ್ರಗಾಮಿಗಳನ್ನು ಬೆಳೆಸುವ ಕೆಲಸ ಮಾಡುತ್ತಿದೆ ಹೊರತು ಬೇರೆ ಏನೂ ಇಲ್ಲ. ಸರ್ಕಾರ ಬಂದ ಮೇಲೆ ಹಿಂದೂ ಕಾರ್ಯಕರ್ತರ ಕೊಲೆ ನಡೆಯುತ್ತಿದೆ. ರಾಜ್ಯದಲ್ಲಿ ಜಿಹಾದಿ ಮುಸ್ಲಿಮರನ್ನು ಬಳಸಿಕೊಂಡು, ಹತ್ಯೆಗಳನ್ನು ಮಾಡ್ತಾ ಇದೆ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ದಾನಮ್ಮ ದೇವಿ ಸರ್ಕಲ್ ದಲ್ಲಿ
ಮಂಗಳೂರಿನ ಹಿಂದೂ ಕಾರ್ಯಕರ್ತರ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ, ಬಿಜೆಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಸಿದ್ದು ಸವದಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಿಂದೂ ಕಾರ್ಯಕರ್ತರನ್ನ ಕೊಲೆ ಮಾಡುವುದು ಸರ್ವೇಸಾಮಾನ್ಯವಾಗಿದೆ. ಜಿಹಾದಿ ಕಾಂಗ್ರೆಸ್ ಸರ್ಕಾರದಲ್ಲಿ ಸಾಮಾನ್ಯ ಜನರಿಗೆ ಹಾಗೂ ಹಿಂದೂ ಕಾರ್ಯಕರ್ತರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಹಿಂದೂ ಕಾರ್ಯಕರ್ತರ ಎಷ್ಟೇ ಕೊಲೆಗಳು ನಡೆದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಸ್ಲಿಂಮರನ್ನು ಓಲೈಕೆ ಮಾಡುತ್ತಿದ್ದಾರೆ ಹೊರತು ಆರೋಪಿಗಳನ್ನು ಬಂಧಿಸಿ ಶಿಕ್ಷೆ ಕೊಡುವ ಕೆಲಸ ನಡಿತಾ ಇಲ್ಲ ಎಂದು ಆರೋಪಿಸಿದರು.
ಕರ್ನಾಟಕದ ಗ್ರಹಮಂತ್ರಿ ಡಾ. ಜಿ ಪರಮೇಶ್ವರ್ ಅವರು ಕೂಡಲೇ ಸುಹಾಸ ಶೆಟ್ಟಿ ಹತ್ಯೆ ಮಾಡಿದ ಕೊಲೆಗಡುಕರನ್ನು ಬಂಧಿಸಿ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.
ಇಂಗಳಿ ಗ್ರಾಮದಲ್ಲಿ ಘೋರ ದುರಂತ; ಕೃಷಿ ಹೊಂಡದಲ್ಲಿ ಮುಳುಗಿ 3 ಮಕ್ಕಳ ದಾರುಣ ಸಾವು
ಇದೇ ಸಂದರ್ಭದಲ್ಲಿ ತೇರದಾಳ ಮತಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀಶೈಲ ಬಿಳಗಿ, ಶ್ರೀಶೈಲ ಗಸ್ತಿ. ಮಾಹಾದೇವ ದುಪದಾಳ ಮಾಹಾದೇವ ಕೋಟ್ಯಾಳ, ಯಲ್ಲಪ್ಪಾ ಕಟಗಿ, ಅರುಣ ಬುದ್ನಿ, ನಂದು ಗಾಯಕವಾಡ, ಮಹಾದೇವ ಆಲಕನೊರ, ಮಾರುತಿ ಗಾಡಿವಡ್ಡರ, ಸುನೀಲ ಶಿಕ್ಕಲಗಾರ, ಶಿಮತಿ ಮಾಹಾನಂದ ಹೊರಟ್ಟಿ, ವಿದ್ದಾ ದಬಾಡಿ, ಗೌರಿ ಮೀಳ್ಳಿ, ಸವಿತಾ ಹೋಸೊರ ಡಳದುಳ, ದುರ್ಗವ್ವ ಹರಿಜನ, ವೈಷ್ಣವಿ ಬಾಗೇವಾಡಿ, ನಂದಾ ಕೋಕಟ್ನೂರ, ಶಂಕರ ಪಾಟೀಲ, ರವಿ ಗಡಾದ, ಪರಶುರಾಮ ಕಾಖಂಡಕಿ, ಸಂಜಯ ತೇಗಿ, ಬಸವರಾಜ ಅಮ್ಮನಗಿಮಠ, ನಿಂಗಪ್ಪಾ ನಾಯಕ, ಬಶ್ಟೇಪ್ಪಾ ಕುಂಚನೊರ, ಬಾಬು ಮಹಾಜನ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.