ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಲೋಕದೊಳಲು ಸಮೀಪ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಳಲ್ಕೆರೆ ತಾಲ್ಲೂಕಿನ ಉಪ್ಪಾರಹಟ್ಟಿ ಗ್ರಾಮದ ಧರಣೇಶ್ (58), ರಂಗಸ್ವಾಮಿ (45) ಮೃತ ದುರ್ದೈವಿಗಳಾಗಿದ್ದು,
ಹೊಸ ಬಟ್ಟೆ ಬಣ್ಣ ಬಿಡುತ್ತೆ ಅನ್ನೋ ಭಯ ಇದ್ದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ! ರಿಸಲ್ಟ್ ಪಕ್ಕಾ
ಘಟನೆಯಲ್ಲಿ ಬಸವರಾಜ್, ಪ್ರದೀಪ್, ಕೃಷ್ಣ, ರುದ್ರೇಶ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಚಾಲಕನ ನಿಯಂತ್ರಣ ತಪ್ಪಿ ಬುಲೇರೋ ಪಿಕಪ್ ವಾಹನ ಸೇತುವೆಗೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭಸಿದೆ. ಗಾಯಾಳುಗಳನ್ನ ಹೊಳಲ್ಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳಕ್ಕೆ ಹೊಳಲ್ಕೆರೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.