ಚಿತ್ರದುರ್ಗ:- ಭೀಕರ ಅಪಘಾತ ನಡೆದು ಮೂರು ಜನ ಸ್ಥಳದಲ್ಲಿಯೇ ಮೃತಪಟ್ಟು, ಆರು ಜನರು ತೀವ್ರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗದ ಸೀಬಾರದ ಬಳಿಯಿಂದು ನಡೆದಿದೆ.
ಮೃತರನ್ನು ಅರ್ಜುನ, ಶ್ರೀಧರ್ ಮತ್ತು ಶರವಣ ಎಂದು ಗುರುತಿಸಿದೆ. ಗಾಯಗೊಂಡವರನ್ನು ಸಲ್ಮಾನ್, ನವೀನ್, ಗೋಕುಲ್ ಸೆಂಥಿಲ್ ಕುಮಾರ್, ರಮೇಶ್ ಮತ್ತು ಗೌತಮ್ ಎಂದು ತಿಳಿದು ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾಗಿದ್ದು, ಘಟನೆಗೆ ಕಾರಣ ಎನ್ನಲಾಗಿದೆ.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.