ಬೆಳಗಾವಿ:- ಭೀಕರ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವ ಘಟನೆ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಹೊರ ವಲಯದ ಬೈಲಹೊಂಗಲ-ಬೆಳಗಾವಿಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಜರುಗಿದೆ.
ಬೇಸಿಗೆಯಲ್ಲಿ ಆಲೂಗಡ್ಡೆ-ಈರುಳ್ಳಿ ಕೆಟ್ಟು ಹೋಗ್ತಿದ್ಯಾ? ಹಾಗಿದ್ರೆ ಹೀಗೆ ಸಂಗ್ರಹಿಸಿಡಿ!
ಬೆಳಗಾವಿಯಿಂದ ಬೈಲಹೊಂಗಲ ಹೋಗುತ್ತಿದ್ದ ಕೀಯಾ ಕಾರು ಓವರ್ ಟೆಕ್ ಮಾಡಲು ಹೋಗಿ ಎದುರಗಡೆ ಬರುತ್ತಿದ್ದ ಅಲ್ಟೋ ಕಾರಿಗೆ ಡಿಕ್ಕಿ ಹೊಡೆದಿದೆ. ಅಲ್ಟೋ ಕಾರಿನಲ್ಲಿದ್ದ ಗಂಡ ಅಯುಮ್, ಹೆಂಡತಿ, ಒಂದು ಮಗು ಸ್ಥಳದಲ್ಲೇ ಮೃತಪಟ್ಟಿದೆ. ಮತ್ತೊಂದು ಮಗುವಿಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಕೀಯಾ ಕಾರಿನಲ್ಲಿದ್ದ ಮಾಜಿ ಶಾಸಕ ಆರ್.ವಿ ಪಾಟೀಲ್ ಪುತ್ರ ಸೇರಿದಂತೆ ಮತ್ತೊಬ್ಬರು ಗಾಯಗೊಂಡಿದ್ದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಶವಗಳು ಸ್ಥಳೀಯ ಆಸ್ಪತ್ರೆಗೆ ಪೊಲೀಸರು ರವಾನಿಸಲಾಗಿದೆ.