ಬಾಗಲಕೋಟೆ: ವಿವಾರ ಬೆಳಿಗಿನ ಜಾವ ಜಿಲ್ಲಾ ಕ್ರೀಡಾಂಗಣದಲ್ಲಿ ಕರಾಟೆ ಪಟುಗಳು ಹಾಗೂ ಆರ್ಮಿ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ತಮ್ಮ ಕಠಿಣ ತರಬೇತಿ ಮುಗಿದ ನಂತರ ಕರಾಟೆ ಮತ್ತು ವಿವಿಧ ಕ್ರೀಡೆಗಳ ಮುಖ್ಯಸ್ಥರೊಂದಿಗೆ ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ದೇಶವಾಸಿಗಳಿಗೆ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.
ಚಿನ್ನದ ಬೆಲೆಗೆ ಕೊಂಚ ಬ್ರೇಕ್: ಬೆಂಗಳೂರಿನಲ್ಲಿ ಚಿನ್ನದ ರೇಟ್ ಎಷ್ಟಿದೆ ಗೊತ್ತಾ!?
ಈ ವೇಳೆ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಕರಾಟೆ ಚೀಪ್ ಕೋಚ್ ಎಸ್. ಆರ್. ರಾಠೋಡ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಮೇಶ ಬದ್ನೂರ, ಆರ್ಮಿ ತರಬೇತಿ ಕೇಂದ್ರದ ಉಮಾಕಾಂತ್ ತೇಲಕರ್ ಸೇರಿದಂತೆ ವಿವಿಧ ಕ್ರೀಡೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು