ಮೈಸೂರು: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಭಯೋತ್ಪಾದಕರು ಭಾರತಕ್ಕೆ ದೊಡ್ಡ ಆಘಾತ ನೀಡಿದ್ದಾರೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಧರ್ಮವನ್ನ ಕೇಳಿ ಹತ್ಯೆ ಮಾಡಿರುವುದು ಬಹಳ ದುಃಖವಾಗಿದೆ. ಮುಸಲ್ಮಾನರು ಧರ್ಮಾಂಧರು ಅಂತ ಹೇಳಲ್ಲ. ಹಿಂದುಗಳಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಲು ಬಯಸುತ್ತೇನೆ. ಈ ನಿರಭಿಮಾನಿ ಹಿಂದುಗಳು ಇದನ್ನ ಅರ್ಥ ಮಾಡಿಕೊಳ್ಳಬೇಕು. ಹೆಸರನ್ನ ಕೇಳಿ ಹತ್ಯೆ ಮಾಡಿದ್ದಾರೆ ಎಂದರೆ ಅಲ್ಲಿ ಮೊಹಮದ್ ಅಂತ ಹೆಸರೇಳಿದ್ರೆ ಕೊಲ್ಲುತ್ತಿರಲಿಲ್ಲ. ಈಗಲಾದರೂ ಹಿಂದುಗಳು ಅರ್ಥ ಮಾಡಿಕೊಳ್ಳಿ. ಜಾತಿ ಜಾತಿ ಎಂದು ಕಿತ್ತಾಡಬೇಡಿ ಎಂದರು.
Helmet Tips: ಹೆಲ್ಮೆಟ್ ಧರಿಸದಿದ್ದರೆ ದಂಡ: ಖರೀದಿಸುವಾಗ ಈ ಸಲಹೆಗಳು ಕಡ್ಡಾಯ!
ಯಾರ ಸಹಕಾರ ಇಲ್ಲದೆ ಇಂತಹ ಘಟನೆ ನಡೆಯಲ್ಲ. ಇದರಲ್ಲಿ ಸ್ಥಳೀಯ ಮುಸ್ಲಿಮರ ಸಹಕಾರ ಇದೆ. ಇವತ್ತು ಜಗತ್ತಿನಲ್ಲಿ ನಡೆಯುವ ಅವಘಡಗಳನ್ನ ನೋಡಿದ್ರೆ ಗೊತ್ತಾಗುತ್ತದೆ. ಮುಸ್ಲಿಮರ ಮನಸ್ಥಿತಿ ಏನು ಅಂತ. ಅದಕ್ಕೆ ಅಂಬೇಡ್ಕರ್ ಅವರು ಪರಿ ಪರಿಯಾಗಿ ಹೇಳಿದ್ರು. ನಮ್ಮ ದೇಶದಲ್ಲಿ ಮುಸ್ಲಿಮರು ಇರೋದು ಬೇಡ ಅಂತ ಹೇಳಿದ್ರು. ತಿಳಿಗೇಡಿ ಹಿಂದುಗಳಿಗೆ ಹೇಳಲು ಬಯಸುತ್ತೇನೆ. ಈಗಲಾದರೂ ಎಚ್ಚೆತ್ತುಕೊಳ್ಳಿ. ಒಗ್ಗಟ್ಟು ಇಲ್ಲದ ಹಿಂದುಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.