ಚಾಮರಾಜನಗರ : ಉಗ್ರರು ಎಲ್ಲೇ ಇರಲಿ, ಯಾವುದೇ ರಾಜ್ಯದಲ್ಲಿರಲಿ ಅವರನ್ನ ಮಟ್ಟ ಹಾಕಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಂಪುಟ ಸಭೆಗಾಗಿ ಚಾಮರಾಜನಗರಕ್ಕೆ ಆಗಮಿಸಿರುವ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ವೇಳೆ ಪಹಲ್ಗಾಮ್‌ನಲ್ಲಿನ ಉಗ್ರ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಉಗ್ರ ಚಟುವಟಿಕೆ ಬೆಳೆಯಲು, ನಡೆಸಲು ಕೇಂದ್ರ ಸರ್ಕಾರ ಅವಕಾಶ ಕೊಡಬಾರದು. ಮೊನ್ನೆ ನಡೆದ ಘಟನೆ ಅತ್ಯಂತ ಅಮಾನವೀಯ, ಹೇಯ ಕೃತ್ಯವಾಗಿದೆ. ಪುಲ್ವಾಮ ಘಟನೆ ನಡೆದಿತ್ತು, ಈಗ ಇದು ನಡೆದಿದೆ, ಮತ್ತೊಮ್ಮೆ ಈ ರೀತಿ ಘಟನೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ; ಶ್ರೀನಗರದಲ್ಲಿ ಸಿಲುಕಿದ್ದ 178 ಕನ್ನಡಿಗರ ಏರ್‌ಲಿಫ್ಟ್
ಪುಲ್ವಾಮ ಘಟನೆ ಬಳಿಕ ಸ್ವಲ್ಪವೂ ವಿಶ್ರಮಿಸಬಾರದಿತ್ತು. ಕೇಂದ್ರ ಸರ್ಕಾರದ ಇಂಟಲಿಜೆನ್ಸ್ ವೈಫಲ್ಯ ಇದೆ ಅನ್ಸುತ್ತೆ. ಉಗ್ರರು ಯಾವುದೇ ಜಾತಿ ಧರ್ಮಕ್ಕೆ ಸೇರಿದವರಾಗಲಿ ಅವರನ್ನ ಮಟ್ಟ ಹಾಕಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ನಮ್ಮ ಸರ್ಕಾರ, ಪಕ್ಷ ಬೆಂಬಲ ನೀಡಲಿದೆ. ಎಲ್ಲರ ಜೊತೆ ನಾವೀದ್ದೇವೆ. 10 ಲಕ್ಷ ಪರಿಹಾರ ಕೊಟ್ಟಿದ್ದೇವೆ. ಬಹಳ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.