ಭಾರತ-ಪಾಕಿಸ್ತಾನ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇಂಡಿಯನ್ಪ್ರೀಮಿಯರ್ ಲೀಗ್-ಐಪಿಎಲ್ ಪಂದ್ಯಾವಳಿ ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ಭದ್ರತಾ ಕಾಳಜಿ ದೃಷ್ಟಿಯಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ-ಬಿಸಿಸಿಐ ನಿರ್ಧಾರ ಪ್ರಕಟಿಸಿದೆ.
ಎಲ್ಲಾ ವಿದೇಶಿ ಆಟಗಾರರು ಅವರ ತಾಯ್ನಾಡಿಗೆ ಕಳುಹಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ನಿನ್ನೆ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಮುಂದೂಡಲಾಗಿದೆ. ಇಂದು ಆರ್ಸಿಬಿ ವರ್ಸಸ್ ಲಕ್ನೋ ನಡುವೆ ಪಂದ್ಯ ನಡೆಯಬೇಕಿತ್ತು.
ಐಪಿಎಲ್ ವಿಶ್ವದಲ್ಲೇ ಅತ್ಯಂತ ದೊಡ್ಡ ಕ್ರಿಕೆಟ್ ಲೀಗ್ ಟೂರ್ನಮೆಂಟ್ ಆಗಿದೆ. ಈ ಬಾರಿ 18ನೇ ಸೀಸನ್ ಮುಗಿಯುವ ಹಂತದಲ್ಲೇ ಟೂರ್ನಿ ರದ್ದಾಗಿ ತಾತ್ಕಾಲಿಕವಾಗು ಸ್ಥಗಿತಗೊಳಿಸಿದೆ. ಭಾರತೀಯ ನಾಗರಿಕರನ್ನು ಟಾರ್ಗೆಟ್ ಮಾಡಿ ಪಾಪಿ ಪಾಕಿಸ್ತಾನ ತನ್ನ ನರಿಬುದ್ದಿ ತೋರಿಸಲಿದೆ. ಹೀಗಾಗಿ ಎಲ್ಲರ ಸುರಕ್ಷತೆ ದೃಷ್ಟಿಯಿಂದ ಐಪಿಎಲ್ನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.