ಜೀವನ ಅನ್ನೋದೇ ಹಾಗೇ..ಯಾವಾಗ ಯಾರಿಗೆ ಏನ್ ಆಗುತ್ತೇ ಅಂತಾ ಹೇಳೋದಿಕ್ಕೆ ಆಗಲ್ಲ. ಈಗಿನ ಕಾಲದ ಜೀವನ ಶೈಲಿ, ಆಹಾರ ಪದ್ಧತಿಯಿಂದ ಆರೋಗ್ಯಯುತರಾಗಿದ್ದವರಿಗೆ ಅದ್ಯಾವಾ ರೋಗ ವಕ್ಕರಿಸಿಕೊಳ್ಳೋತ್ತೋ ಹೇಳಲು ಆಗುವುದಿಲ್ಲ. ತುಂಬಾ ಫಿಟ್ ಅಂಡ್ ಫೈನ್ ಆಗಿದ್ದ ಚಿತ್ರರಂಗದ ಕಲಾವಿದರೊಬ್ಬರು ಧೀಡೀರ್ ಹಾಸಿಗೆ ಹಿಡಿದಿದ್ದಾರೆ.
ಕಿರುತೆರೆ ಹಾಗೂ ಬೆಳ್ಳಿತೆರೆ ಎರಡಲ್ಲಿಯೂ ಗುರುತಿಸಿಕೊಂಡಿರುವ ಶ್ರೀಧರ್ ನಾಯ್ಕ್ ಹಾಸಿಗೆ ಹಿಡಿದಿದ್ದಾರೆ. ಅವರಿಗೆ ಯಾವ ಖಾಯಿಲೆಯಾಗಿದೆ ಅನ್ನೋದು ಗೊತ್ತಿಲ್ಲವಂತೆ. ಇನ್ಪೆಕ್ಷ್ ಆಗಿ ಆ ನಂತರ ಸಂಪೂರ್ಣ ಅನಾರೋಗ್ಯದಿಂದ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗಾಗಿ ಸಾಕಷ್ಟು ಖರ್ಚಾಗುತ್ತಿದ್ದು, ಹೀಗಾಗಿ ಸಹಾಯಬೇಕೆಂದು ಕೇಳಿಕೊಂಡಿದ್ದಾರೆ. ಅವರ ಜೊತೆ ನಟಿಸಿದ ಕಲಾವಿದರು ಅವರ ಬೆನ್ನಿಗೆ ನಿಂತು ಸಹಾಯ ಹಸ್ತ ಕೇಳಿಕೊಂಡಿದ್ದಾರೆ. ನಟಿ ಅಂಕಿತಾ ನಿಂಗಿ ಈ ಬಗ್ಗೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಶ್ರೀಧರ್ ನಾಯ್ಕ್ ಅವರನ್ನು ನೋಡಿಕೊಳ್ಳಲು ಯಾರು. ಅವರ ತಾಯಿ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಶ್ರೀಧರ್ ನಾಯ್ಕ್ ಅವರು ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ ಮ್ಯಾಕ್ಸ್ ಹಾಗೂ ಪಾರು ಸೀರಿಯಲ್ ನಲ್ಲಿ ನಟಿಸಿದ್ದಾರೆ. ರಂಗ ಶಿಕ್ಷಕರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಬೀದಿ ನಾಟಕ ಹಾಗೂ ಮಕ್ಕಳ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಕಾರ್ಟೂನ್ ಧಾರಾವಾಹಿಗಳಿಗೆ ಕಂಠದಾನ ಕಲಾವಿದರಾಗಿಯೂ ಕೆಲಸ ಮಾಡಿದ್ದಾರೆ.