ಹುಬ್ಬಳ್ಳಿ: ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ಬಿಜೆಪಿಯವರು ಹಿಡಿದುಕೊಂಡಿರುವ ಅಸ್ತ್ರವಾಗಿಸಿಕೊಂಡು, ಕೇವಲ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡತಾ ಇದೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಪ್ರಜೆಗಳು ಅಂತಾ ಒಪ್ಪಿಕೊಂಡ ಮೇಲೆ ನ್ಯಾಯಯುತ ಹಕ್ಕನ್ನ ಕೊಡಬೇಕು. ಈ ಬಗ್ಗೆ ಯಾಕೆ ಅಸೂಯೆ ಇದರಲ್ಲಿ ತಮ್ಮ ಉದ್ದೇಶ ಏನು..? ರಾಷ್ಟ್ರದಲ್ಲಿ ದೇಶ ರಾಷ್ಟ್ರ ಕಟ್ಟುವುದರಲ್ಲಿ ಒಂದು ಎಲ್ಲರಿಗಿಂತ ಮುಂದೆ ಇದ್ದಾರೆ. ಅಲ್ಪ ಸಂಖ್ಯಾತರಿಗೆ ಏನಾದರೂ ಸೌಲಭ್ಯ ಕೊಟ್ಟರೆ ಟೀಕೆ ಟಿಪ್ಪಣಿ ಆಗಿದ್ದು ನೀವು ಟಿಪ್ಪು ಸುಲ್ತಾನ್ರ ಟೊಪ್ಪಿಗೆ ಹಾಕಿಕೊಂಡು ತಿರುಗಾಡುತ್ತಿರೆ. ಇದು ನಿಮಗೆ ಬಹಳ ಯೋಗ್ಯ ಅನ್ನಿಸುತ್ತಾ ಇದ್ದು ಬಿಜೆಪಿಯವರೆಗೆ ಬೇಕಾದಾಗ ಇಪ್ತಿಯಾರ್ ಕೂಟ ಮಾಡುತ್ತಾರೆ ಎಂದದರು.
ಇನ್ನೂ ಜಾತಿ ಗಣತಿ ವರದಿ ಕುರಿತು ಮೇ.2ರಂದು ಇನ್ನೊಂದು ಸಲ ಸಚಿವ ಸಂಪುಟ ಸಭೆ ಕರೆದ ವಿಚಾರವಾಗಿ ಮಾತನಾಡಿ, ಜಾತಿ ಗಣತಿ ವರದಿ ಸಂಪೂರ್ಣ ಅಧ್ಯಯನ ಆಗಿರಲಿಲ್ಲ. ಅದಕ್ಕೆ ಸಚಿವ ಸಂಪುಟದ ಸಭೆ ಕರೆಯಲಾಗಿದೆ. ಇದರ ಬಗ್ಗೆ ಸಂಪೂರ್ಣ ಅಧ್ಯಯನ ಆಗಬೇಕು. ಈ ಕುರಿತು ಚರ್ಚೆ ಮುಂದುವರಿಸಲು ಸಚಿವ ಸಂಪುಟದ ಸಭೆ ಕರೆಯಲಾಗಿದೆ ಎಂದರು.
ಜನಿವಾರ ವಿವಾದ ಕೇಸ್: ಬೀದರ್ನ ಖಾಸಗಿ ಕಾಲೇಜಿನ ಪ್ರಿನ್ಸಿಪಾಲ್, ಸಿಬ್ಬಂದಿ ಸಸ್ಪೆಂಡ್!
ರೋಹಿತ್ ವೆಮಲ್ ಕಾಯ್ದೆಗಾಗಿ ರಾಹುಲ್ ಗಾಂಧಿಯಿಂದ ಸಿಎಂ ಸಿದ್ಧರಾಮಯ್ಯಾನರಿಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿ, ರೋಹಿತ ವೆಮಲ್ ಕಾಯ್ದೆ ಜಾರಿ ಅತ್ಯಂತ ಸೂಕ್ತವಾಗಿದ್ದುಇಂದು ಕರ್ನಾಟಕ ಈ ಕಾಯ್ದೆ ರಾಹುಲ್ ಗಾಂಧಿ ಸಿಎಂ ಸಿದ್ಧರಾಮಯ್ಯಾನವರೆಗೆ ಪತ್ರ ಬರೆದಿದ್ದಾರೆ ಈ ಕುರಿತು ಸಿಎಂ ಸಿದ್ಧರಾಮಯ್ಯನವರು ಚಿಂತನೆ ಮಾಡುತ್ತಾರೆ. ರಾಹುಲ್ ಗಾಂಧಿ ಓರ್ವ ಅಪ್ರಬುದ್ಣ ವ್ಯಕ್ತಿ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಕಿಡಿ ಕಾರಿದರು. ದಿನದಿಂದ ದಿನಕ್ಕೆ ಪಿಎಂ ನರೇಂದ್ರ ಮೋದಿ ಇಮೇಜ್ ಕಡಿಮೆ ಆಗತಾ ಇದೆ. ಸಹಜವಾಗಿ ಬೆಳೆಯುತ್ತಿರುವ ನಾಯಕರ ಮೇಲೆ ಅಸೂಯೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.