ಬೆಂಗಳೂರು:- ಇಂದು ಬೆಳಿಗ್ಗೆ ಕಾಶ್ಮೀರ ಉಗ್ರರ ದಾಳಿಗೆ ಬಲಿಯಾದ ಮೂವರು ಕನ್ನಡಿಗರ ಮೃತದೇಹವನ್ನು ಬೆಂಗಳೂರು ಏರ್ಪೋರ್ಟ್ ಗೆ ತರಲಾಯಿತು. ಕುಟುಂಬಸ್ಥರ ಜೊತೆ ಕೇಂದ್ರ ಸಚವ ವಿ ಸೋಮಣ್ಣ ಹಾಗೂ ಸಂಸದ ತೇಜಸ್ವಿ ಸೂರ್ಯ ಜೊತೆಯಾಗಿದ್ದು ಧೈರ್ಯ ತುಂಬಿದರು.
ಕಾಶ್ಮೀರದಲ್ಲಿ ಉಗ್ರರ ದಾಳಿ: ಗುಂಡಿನ ದಾಳಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಅರ್ಪಣೆ!
ಬಳಿಕ ಮಾತನಾಡಿದ ವಿ ಸೋಮಣ್ಣ, ಈ ಘಟನೆಯನ್ನ ಇಡೀ ವಿಶ್ವವೇ ಖಂಡಿಸಿದೆ. ಸದ್ಯ ನಮ್ಮ ಪ್ರಧಾನಿ ಇಡಿ ವಿಶ್ವ ಮೆಚ್ಚುವಂತ ನಿರ್ಧಾರ ತೆಗೆದುಕೊಂಡಿದ್ದಾರೆ
ಒಂದು. ಉಗ್ರರು ಅಮಾಯಕರನ್ನ ಬಲಿ ಪಡೆದಿದ್ದಾರೆ. ದೇಶವನ್ನ ಅಸ್ಥಿರ ಮಾಡಬೇಕು ಅನ್ನೋರಿಗೆ ಸಂದೇಶ ಕೊಟ್ಟಿದ್ದಾರೆ. ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ ಇದು. ಮುಗ್ದರ ಕೊಲೆ ಮಾಡಿರುವರನ್ನ ತಕ್ಕ ಶಿಕ್ಷೆ ಕೊಡುವಂತೆ ಕೆಲಸ ಮಾಡ್ತೀವಿ. ಕುಟುಂಬಸ್ಥರಿಗೆ ನೋವನ್ನ ಭರಿಸುವ ಶಕ್ತಿ ಭಗವಂತ ನೀಡಲಿ ಎಂದರು.