ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಛತ್ರಪತಿ ಶಿವಾಜಿ ಮಹಾರಾಜ್ ಸಂಘದಿಂದ ಪಹಲ್ಗಾಮದಲ್ಲಿ ನಾಗರಿಕರ ಮೇಲೆ ಉಗ್ರದಿಂದ ಹತ್ಯೆ ಖಂಡಿಸಿ ರಬಕವಿಯ ಹೊಸ ಬಸ್ ನಿಲ್ದಾಣದಿಂದ ಶಂಕರಲಿಂಗ ಆವರ್ಣದವರೆಗೂ ಪಂಜಿನ ಮೆರವಣಿಗೆ ಮಾಡಿದರು.
ಈ ವೇಳೆ ಮಾತನಾಡಿದ ತೇರದಾಳ ಶಾಸಕ ಸಿದ್ದು ಸವದಿ, ಈ ದೇಶದಲ್ಲಿರುವಂತ ಭಯೋತ್ಪಾದಕರು ಮತ್ತು ಉಗ್ರರನ್ನ ಕೊಲ್ಲುವುದೇ ನಮ್ಮ ಮೊದಲ ಆದ್ಯತೆ ಮತ್ತು ಉಗ್ರರನ್ನು ಸಂಹಾರ ಮಾಡುತ್ತೇವೆ ಎಂದರು. ಯಾರಾದರೂ ಹೇಡಿತನದ ದಾಳಿ ಮಾಡಿ ಅದು ತಮಗೆ ಸಿಕ್ಕಿದ ದೊಡ್ಡ ಗೆಲುವು ಎಂದು ಭಾವಿಸಿದರೆ ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ. ಕೇಂದ್ರದಲ್ಲಿ ಇರುವುದು ನರೇಂದ್ರ ಮೋದಿ ಸರ್ಕಾರ. ಯಾರನ್ನೂ ಬಿಡುವುದಿಲ್ಲ. ಭಾರತ ದೇಶದ ಪ್ರತಿಯೊಂದು ಇಂಚಿನಿಂದಲೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವುದು ನಮ್ಮ ಸಂಕಲ್ಪ ಮತ್ತು ಆ ಸಂಕಲ್ಪ ಈಡೇರುತ್ತದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ನಾವು ಎಲ್ಲದಕ್ಕೂ ಬಲವಾದ ಉತ್ತರ ನೀಡಿದ್ದೇವೆ, ಅದು ಈಶಾನ್ಯವಾಗಿರಬಹುದು, ಎಡಪಂಥೀಯ ನಕ್ಸಲ್ ವಾದದ ಪ್ರದೇಶಗಳಾಗಿರಬಹುದು ಅಥವಾ ಕಾಶ್ಮೀರದಲ್ಲಿ ಭಯೋತ್ಪಾದನೆಯ ನೆರಳಾಗಿರಬಹು. ಯಾರನ್ನೂ ನಾವು ಬಿಡುವುದಿಲ್ಲ. ಈ ದೇಶದ ಪ್ರತಿಯೊಂದು ಇಂಚಿನಿಂದಲೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವುದು ನಮ್ಮ ಸಂಕಲ್ಪ ಎಂದು ಗುಡುಗಿದರು.
ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಹತ್ಯೆ ; ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ
ಇದೇ ಸಂದರ್ಭದಲ್ಲಿ ಮಹಾದೇವ ದುಪದಾಳ.ದರೇಪ್ಪಾ ಉಳ್ಳಾಗಡ್ಡಿ.ಸಂಜಯ ತೇಗಿ. ನಂದು ಗಾಯಕ್ವಾಡ, ಮಾಹಾದೇವ ಕೋಟ್ಯಾಳ, ಪ್ರಭು ಪೂಜಾರಿ, ಮಲ್ಲಿಕಾರ್ಜುನ ಹೊಸಮನಿ, ಕರಡಿ ಬಸವರಾಜ ಮನ್ಮಿ, ಬಸವರಾಜ್ ಮೂಡಲಗಿ, ಛತ್ರಪತಿ ಶಿವಾಜಿ ಮಹಾರಾಜ್ ಯುವಕ ಸಂಘದ ಅಧಿಕಾರಿಗಳಾದ ಮಾರುತಿ ಗಾಡಿವಡ್ಡರ, ಮಹಾದೇವ ಜಾದವ, ಸುನೀಲ್ ಸಿಕ್ಕಲಗಾರ, ಮಹಾದೇವ್ ಬಿಸನಾಳ, ಮಹಾದೇವ ಅಲಕ್ನೂರ್, ಬಸವರಾಜ ಪೂಜಾರ, ವಿಜಯ್ ಆತಪಕ್ಕಿ, ಯಲ್ಲಪ್ಪ ಕಟಗಿ, ಹನುಮಂತ್ ಹಿಪ್ಪರಗಿ, ಪಾಂಡು ಯರ್ಕಣ್ಣವರ, ಸುಭಾಷ್ ಭಯಂತ್ರಿ , ಗಣೇಶ್ ಸುಧಾಳ, ನಾಗಪ್ಪ ಹನಗಂಡಿ, ದೀಪಕ್ ಗೊಲ್ಪೆ, ಮಾಂತೇಶ್ ಕವಾಸಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು .