ಕಂಕುಳಿನ ಭಾಗ ಕಪ್ಪಾಗಿದ್ದರೆ ಹುಡುಗಿಯರು ಸ್ಲಿವ್ಲೆಸ್ ಡ್ರೆಸ್ಗಳನ್ನು ಹಾಕಲು ಮುಜುಗರಪಟ್ಟುಕೊಳ್ಳುತ್ತಾರೆ. ಯಾಕೆಂದರೆ ಇದು ತುಂಬಾ ಅಸಹ್ಯವಾಗಿ ಕಾಣುತ್ತದೆ. ಆದರೆ ನೀವು ಚಿಂತಿಸುವ ಅಗತ್ಯವಿಲ್ಲ. ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸುವುದರಿಂದ ಕಂಕುಳು ಕಪ್ಪಾಗಿರುವುದನ್ನು ಸುಲಭವಾಗಿ ಹೋಗಲಾಡಿಸಬಹುದು. ಆದರೆ ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ತಾಳ್ಮೆಯಿಂದ ಕಾಯಬೇಕಾಗುತ್ತದೆ.
ಬೇಡದ ಕೂದಲನ್ನು ತೆಗೆಯಲು ಶೇವಿಂಗ್ ಮಾಡುವುದು, ಬೆವರಿನ ವಾಸನೆಯನ್ನು ತಡೆಯಲು ಡಿಯೋಡರೆಂಟ್ಗಳನ್ನು ಬಳಸುವುದು, ಡೆಡ್ ಸ್ಕಿನ್ನಿಂದ ಮತ್ತು ಹಾರ್ಮೋನುಗಳ ಅಸಮತೋಲನದಿಂದ ಕಂಕುಳಿನ ಭಾಗ ಕಪ್ಪಾಗುತ್ತದೆ. ಚರ್ಮರೋಗ ತಜ್ಞರು ತಿಳಿಸಿದ ಪ್ರಕಾರ ಈ ಸಮಸ್ಯೆಯನ್ನು ಸರಳ ಮನೆಮದ್ದುಗಳನ್ನು ಬಳಸಿ ಬಿಳುಪಾಗಿಸಬಹುದು.
ಅನೇಕ ಯುವತಿಯರಿಗೆ ಸ್ಲೀವ್ಲೆಸ್ ಡ್ರೆಸ್ ಧರಿಸುವುದು ಎಂದರೆ ಬಹಳ ಇಷ್ಟ. ಆದರೆ ಈ ರೀತಿಯ ಬಟ್ಟೆಗಳನ್ನು ಧರಿಸಿದಾಗ ಕುಂಕುಳಿನ ಭಾಗದಲ್ಲಿ ಕಪ್ಪು ಕಲೆಗಳು ಎದ್ದು ಕಾಣುತ್ತದೆ. ಇದರಿಂದ ಎಷ್ಟೋ ಬಾರಿ ಕೈ ಎತ್ತಲು ಮುಜುಗರ ಪಡುತ್ತಾರೆ. ಅಲ್ಲದೇ ಇದನ್ನು ಬೇರೆಯವರು ಸಹ ಅಸಹ್ಯಕರ ರೀತಿಯಲ್ಲಿ ಕಾಣುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಅನೇಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಹೀಗಿದ್ದರೂ ಎಷ್ಟೋ ಬಾರಿ ತಾವು ಅಂದುಕೊಂಡಂತೆ ಉತ್ತಮ ಫಲಿತಾಂಶ ಸಿಗದೇ ನಿರಾಸೆಗೊಳ್ಳುತ್ತಾರೆ.
ವಾಸ್ತವವಾಗಿ ಈ ಕಂಕುಳಿನ ಕಪ್ಪು ಕಲೆ ಸಮಸ್ಯೆಗೆ ನಾನಾ ಕಾರಣಗಳಿವೆ. ಇದಕ್ಕಾಗಿ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಕಂಕುಳಿನ ಕಪ್ಪು ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು. ಅಲ್ಲದೇ ಈ ಮನೆಮದ್ದುಗಳ ಬಳಕೆ ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ಜೊತೆಗೆ ಇದು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಹಾಗಾದರೆ ಕಂಕುಳಿನ ಕಪ್ಪು ಕಲೆ ನಿವಾರಣೆಗೆ ಏನು ಮಾಡಬೇಕು ಎಂದು ತಿಳಿಯೋಣ.
ಕಂಕುಳಿನ ಕಪ್ಪು ಕಲೆಗಳಿಗೆ ಶಾಂಪೂ ಟ್ರಿಕ್: ಶಾಂಪೂ ಸಹಾಯದಿಂದ ನೀವು ಡಾರ್ಕ್ ಅಂಡರ್ ಆರ್ಮ್ ಅನ್ನು ತೊಡೆದುಹಾಕಬಹುದು. ಇದಕ್ಕಾಗಿ ಒಂದು ಚಮಚ ಟೊಮೆಟೊ ತಿರುಳು, ಒಂದು ಚಮಚ ಕಾಫಿ, ಒಂದು ಚಮಚ ಕಡಲೆ ಹಿಟ್ಟು, ಒಂದು ಚಮಚ ಶಾಂಪೂ, ಒಂದು ಚಮಚ ಅಡುಗೆ ಸೋಡಾ ಮತ್ತು ಅರ್ಧ ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ.
ನಂತರ ಈ ಪೇಸ್ಟ್ ಅನ್ನು ಅಂಡರ್ ಆರ್ಮ್ಸ್ (ಕಂಕುಳಿನ ಕಪ್ಪು ಕಲೆ) ಮೇಲೆ ಹಚ್ಚಿ, 5 ರಿಂದ 10 ನಿಮಿಷಗಳ ಕಾಲ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ನೀವು ವ್ಯತ್ಯಾಸವನ್ನು ಕಾಣುತ್ತೀರಿ. ಈ ಪೇಸ್ಟ್ ಅನ್ನು ನೀವು ವಾರಕ್ಕೆ ಎರಡು ಬಾರಿ ಹಚ್ಚಬಹುದು. ನೀವು ಈ ಪೇಸ್ಟ್ ಅನ್ನು ಮೊಣಕಾಲುಗಳು ಮತ್ತು ಮೊಣಕೈಗಳಿಗೆ ಸಹ ಬಳಸಬಹುದು. ಈ ಪೇಸ್ಟ್ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ
ಆಲೂಗಡ್ಡೆ ರಸ: ಡಾರ್ಕ್ ಅಂಡರ್ ಆರ್ಮ್ಸ್ ಕ್ಲೀನ್ ಮಾಡಲು ಆಲೂಗಡ್ಡೆ ರಸವನ್ನು ಬಳಸಿ. ಇದಕ್ಕಾಗಿ ಆಲೂಗೆಡ್ಡೆಯನ್ನು ಮಿಕ್ಸಿಗೆ ಹಾಕಿ ಅದರ ರಸವನ್ನು ತೆಗೆದುಕೊಂಡು ಬಟ್ಟಲಿನಲ್ಲಿ ತೆಗೆದುಕೊಳ್ಳಿ. ನಂತರ ಹತ್ತಿ ಉಂಡೆಯನ್ನು ಅದರೊಳಗೆ ಅದ್ದಿ, ನಂತರ ಕಂಕುಳಿಗೆ ಹಚ್ಚಿ, ಅರ್ಧ ಗಂಟೆಯವರೆಗೆ ಬಿಡಿ. ನಂತರ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಕಂಕುಳಿನ ತ್ವಚೆ ನಯವಾಗುತ್ತದೆ.
ಅರಿಶಿನ: ಒಂದು ಚಮಚ ಅರಿಶಿನ, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಮೊಸರನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕಂಕುಳಲ್ಲಿ 10 ರಿಂದ 15 ನಿಮಿಷಗಳ ಕಾಲ ಹಚ್ಚಿ. ನಂತರ ನೀರಿನಿಂದ ತೊಳೆಯಿರಿ. ಅರಿಶಿನವು ಹಲವಾರು ಚರ್ಮದ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಹೊಂದಿದೆ.
ಸೌತೆಕಾಯಿ ರಸ: ಸೌತೆಕಾಯಿ ರಸವು ಚರ್ಮಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಸೌತೆಕಾಯಿ ರಸವು ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು ಅದು ಚರ್ಮವನ್ನು ಸ್ವಚ್ಛಗೊಳಿಸಲು ಕೆಲಸ ಮಾಡುತ್ತದೆ. ಇದು ಚರ್ಮವನ್ನು ತೇವಾಂಶದಿಂದ ಕೂಡಿರಿಸುತ್ತದೆ
ಇದಕ್ಕಾಗಿ ಸೌತೆಕಾಯಿ ರಸವನ್ನು ಕಂಕುಳಲ್ಲಿ 20 ನಿಮಿಷಗಳ ಕಾಲ ಹಚ್ಚಬೇಕು. ನಂತರ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಚರ್ಮ ತಂಪಾಗುತ್ತದೆ.