ಹುಬ್ಬಳ್ಳಿ: ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಆರಂಭಿಸಲಾದ 2024-25ನೇ ಸಾಲಿನ ‘ಡಿಜಿ ಮತ್ತು ಐಜಿಪಿ ಪ್ರಶಂಸನಾ ಪದಕ’ ಪ್ರಶಸ್ತಿಗೆ ಹುಬ್ಬಳ್ಳಿ ಗುಪ್ತಚರ ಇಲಾಖೆಯ ಅಧಿಕಾರಿ ಮುರಲೀಧರ ಬ ಹುಜರತ್ತಿ ಅವರು ಭಾಜನರಾಗಿದ್ದಾರೆ. ಅಧಿಕಾರಿಗಳು ಪ್ರಶಂಸನಾ ಪತ್ರ ಪಡೆದುಕೊಂಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.
ಸಿಡಿಲು ಬಡಿದು ಯುವಕ ಸಾವು: ಮೃತನ ಕುಟುಂಬಕ್ಕೆ ಶಾಸಕ ಎಮ್ ಆರ್ ಪಾಟೀಲ ಭೇಟಿ!
ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪೊಲೀಸ್ ಇಲಾಖೆಯ ಸಾಧಕರಿಗೆ ಬೆನ್ನು ತಟ್ಟುವ ಕಾರ್ಯ ನಡೀತಿದೆ. ಮೊದಲ ಬಾರಿಗೆ “ಡಿಜಿ & ಐಜಿಪಿ ಪ್ರಶಂಸನಾ ಡಿಸ್ಕ್ 2024-25” ರ ಅಡಿ ಪುರಸ್ಕಾರಕ್ಕೆ ರಾಜ್ಯದ 200 ಪೊಲೀಸ್ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.