ಸ್ಯಾಂಡಲ್‌ವುಡ್ ಕಿಂಗ್ ಶಿವಣ್ಣನಿಗೆ ವಯಸ್ಸೇ ಆಗೋಲ್ವಾ? ಇದು ಅಖಂಡ ಸಿನಿಮಾಪೇಮಿಗಳ ಪ್ರಶ್ನೆ. 60 ವಯಸ್ಸು ಕಳೆದರೂ ಶಿವಣ್ಣ ಅವರದ್ದು 20ರ ಹರೆಯದ ಲುಕ್, ಚಾರ್ಮ್. ಕ್ಯಾನ್ಸರ್ ಗೆದ್ದು ಸದ್ಯ ಸಿನಿಮಾ, ಶೂಟಿಂಗ್ ಅಂತಾ ಬ್ಯುಸಿಯಾಗಿರುವ ದೊಡ್ಮನೆ ದೊರೆ ಚೆನ್ನೈನಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಶಿವಣ್ಣ ಸದ್ಯ 131 ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರೀಕರಣಕ್ಕೆ ಕೊಂಚ ವಿರಾಮ ಕೊಟ್ಟು ಪತ್ನಿ ಗೀತಾ ಶಿವರಾಜ್ ಕುಮಾರ್ ಚೆನ್ನೈಗೆ ಹಾರಿದ್ದಾರೆ. ಚೆನ್ನೈನಲ್ಲಿ ಶಿವ ಗೀತಾ ದಂಪತಿ ಒಟ್ಟಿಗೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಶಿವಣ್ಣ ಹಳದಿ ಬಣ್ಣದ ಟೀ ಶರ್ಟ್ ತೊಟ್ಟು ಹದಿಹರೆಯದ ಹುಡುಗನಂತೆ ಕಾಣಿಸಿಕೊಂಡಿದ್ದಾರೆ. ಕಿಂಗ್ ಹೊಸ ಲುಕ್ ನೋಡಿ ಶಿವಪಡೆ ನಮ್ ಬಾಸ್ ಯಾವಾಗಲೂ ಸೂಪರ್ ಅಂತಿದ್ದಾರೆ. ಸದ್ಯ ಶಿವಣ್ಣ ಜೈಲರ್ 2, ರಾಮ್ ಚರಣ್ ನಟಿಸುತ್ತಿರುವ ಪೆದ್ದಿ, 131 ಚಿತ್ರದ ಶೂಟಿಂಗ್ ಜೊತೆಗೆ 45 ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ