ಕಲಘಟಗಿ: ತಾಲೂಕಿನ ದೇವಿಕೊಪ್ಪ ಹಾಗೂ 3 ತಂಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಂಚ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಗ್ಯಾರಂಟಿ ಯೋಜನೆಗಳ ನಡೆ ಗ್ರಾಮ ಪಂಚಾಯಿತಿ ಕಡೆ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಅಧ್ಯಕ್ಷರಾದ ಎಸ್.ಆರ್ ಪಾಟೀಲ ಚಾಲನೆ ನೀಡಿ ಮಾತನಾಡಿದರು.
ಇ-ಕಾಮರ್ಸ್ ತಾಣಗಳಿಗೆ ಎಚ್ಚರಿಕೆ ಕೊಟ್ಟ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ!
ಅರ್ಹ ಗ್ರಾಮದಲ್ಲಿ ಇರುವ ಪ್ರತಿಯೊಬ್ಬ ಫಲಾನುಭವಿಗಳು ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಪಂಚ್ ಗ್ಯಾರಂಟಿ ಯೋಜನೆಯ ಉಪಯೋಗಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕು ಯಾರು ಗ್ಯಾರೆಂಟಿ ಯೋಜನೆಯ ಸೌಲಭ್ಯಗಳಿಂದ ವಂಚಿತರಾಗಬಾರದು.
ಸರಕಾರ ಎಲ್ಲಾ ಬಡತನ ರೇಖೆ, ಜಾತಿ ಜನಾಂಗ, ಬಡವರ ಶೋಷಿತರ ಪರವಾಗಿದೆ ಎಂದು ಸಾಬೀತುಪಡಿಸಿದೆ ಎಂದು ಹೇಳಿದರು.
ಗ್ರಾಮದ ಮಹಿಳೆಯರೊಂದಿಗೆ ಚರ್ಚಿಸಿ ಗೃಹಲಕ್ಷ್ಮಿಯ ಮೊತ್ತವನ್ನು ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ತಪಾಸಣೆ, ಹೈನುಗಾರಿಕೆ, ಹೊಲಿಗೆ ಯಂತ್ರ ಖರೀದಿಸಿ ಸಾವಲಂಬಿ ಬದುಕು ಕಟ್ಟಿಕೊಳ್ಳಿ,
ಕಾರ್ಯಕ್ರಮ ಉದ್ದೇಶಿಸಿ ತಾಲೂಕು ಅನುಷ್ಠಾನದ ಅಧ್ಯಕ್ಷರಾದ ಬಸವರಾಜ ಬಾವುಕಾರ್ ಮಾತನಾಡಿ ತಾಂತ್ರಿಕ ದೋಷ ಇದ್ದರೆ ಸಮಿತಿಯ ಗಮನಕ್ಕೆ ಪ್ರತಿಯೊಬ್ಬರು ತರಬೇಕು, ಈಗಾಗಲೇ ತಾಲೂಕಿನ ಅತ್ಯಂತ ಶೇಕಡ 97 ರಷ್ಟು ಫಲಾನುಭವಿ ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ. ತಾಲೂಕಿನಾದ್ಯಂತ ಪಂಚ್ ಗ್ಯಾರಂಟಿ ಯೋಜನೆಯ ನೂರರಷ್ಟು ಪ್ರಗತಿ ಸಾಧಿಸಬೇಕು ಈ ಕುರಿತು ಸಮಿತಿಯ ಅಗತ್ಯ ಕ್ರಮ ಕೈಗೊಳ್ಳುವಲಾಗುವುದು.
ಅಹಾಲುಗಳ ಸುರಿಮಳೆ
ಪ್ರತಿ ತಿಂಗಳು ಸಮರ್ಪಕವಾಗಿ ಹಣ ಬರುತ್ತಿಲ್ಲ, ಗೃಹ ಜ್ಯೋತಿ ಕುರಿತು ನಡೆದ ಚರ್ಚಾ ವೇಳೆಯಲ್ಲಿ ಮಳೆಗಾಳಿಗೆ ವಿದ್ಯುತ್ ಕಂಬ ಹಾಗೂ ನೇತಾಡುವ ತಂತಿ ಕೂಡಲೇ ಸರಿಪಡಿಸಿ, ಸಮಯಕ್ಕೆ ಸರಿಯಾಗಿ ಬಸ್ ಗಳು ಪೂರೈಸುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.
ಯೋಜನೆಗಳ ಬಗ್ಗೆ ಲೋಪ ದೋಷಗಳಿದ್ದರೆ ತಿಳಿಸಿ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ, ಯುವನಿಧಿ, ಅನ್ನ ಭಾಗ್ಯ, ಗೃಹ ಜ್ಯೋತಿ, ಸರ್ಕಾರದ ಯೋಜನೆಗಳ ಬಗ್ಗೆ ಕುಂದು ಕೊರತೆ ಪ್ರಗತಿ ಪರಿಶೀಲನೆ ಸಭೆಯನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಮೊದಲನೆಯ ಕಾರ್ಯಕ್ರಮ ಇದಾಗಿದೆ.
| ಪರಶುರಾಮ ಸಾವಂತ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ
ಜಿಲ್ಲಾ ಪಂಚಾಯತಿ ಯೋಜನೆಯ ಅನುಷ್ಠಾನ ಅಧ್ಯಕ್ಷ ಎಸ್.ಆರ್ ಪಾಟೀಲ್, ತಾಲೂಕು ಅನುಷ್ಠಾನ ಅಧ್ಯಕ್ಷ ಬಸವರಾಜ್ ಬವುಕಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರುಶುರಾಮ್ ಸಾವಂತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅನಿತಾ ಕೋಲೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗರಾಜ್ ಬಿದರಳ್ಳಿ, ಶಂಕ್ರಮ್ಮ ಬೋವಿ, ತಾಲೂಕು ಪಂಚ್ ಗ್ಯಾರಂಟಿ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.
ಮಾರುತಿ ಲಮಾಣಿ AIN ನ್ಯೂಸ್ ಕಲಘಟಗಿ