ತುಮಕೂರು: ಭಾರತೀಯ ಸೈನ್ಯಕ್ಕೆ ಫ್ರೀ ಹ್ಯಾಂಡ್ ಕೊಟ್ಟ ಹಾಗೆ ರಾಜ್ಯದ ಪೊಲೀಸರಿಗೆ ಸರ್ಕಾರ ಫ್ರೀ ಹ್ಯಾಂಡ್ ಕೊಡಲಿ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಮಾತನಾಡಿದ ಅವರು, ಭಾರತೀಯ ಸೈನ್ಯಕ್ಕೆ ಫ್ರೀ ಹ್ಯಾಂಡ್ ಕೊಟ್ಟ ಹಾಗೆ ರಾಜ್ಯದ ಪೊಲೀಸರಿಗೆ ಸರ್ಕಾರ ಫ್ರೀ ಹ್ಯಾಂಡ್ ಕೊಡಲಿ, ದೇಶಕ್ಕೆ ಮಾರಕ ಆಗಿರುವಂತಹ ಈ ರೀತಿಯ ದುಷ್ಕರ್ಮಿಗಳಿಗೆ ಸಾಫ್ಟ್ ಕಾರ್ನರ್ ತೋರಿಸುವ ವ್ಯವಸ್ಥೆ ಆಗಬಾರದು ಎಂದು ಹೇಳಿದರು.
ಮಗು ಆದ್ಮೇಲೆ Hair Fall ಜಾಸ್ತಿ ಆಗಿದ್ಯಾ!? ಹಾಗಿದ್ರೆ ತಪ್ಪದೇ ಆಹಾರದಲ್ಲಿ ಈ ವಸ್ತು ಸೇರಿಸಿ!
ಮುಲಾಜಿಲ್ಲದೆ ಗೃಹ ಸಚಿವರು ತಮ್ಮ ಅನುಭವವನ್ನು ಇದರಲ್ಲಿ ತೋರಿಸಬೇಕು. ಇಲ್ಲದಿದ್ದರೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದು ಗೊತ್ತಾಗದಿದ್ದಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ. 10 ನಿಮಿಷದಲ್ಲಿ ಕ್ರಮ ಆಗಲಿದೆ ಎಂದು ತಿಳಿಸಿದರು.
ಇಂತಹ ಅಯೋಗ್ಯರು ಹಾಗೂ ದೇಶಕ್ಕೆ ಮಾರಕವಾಗಿರುವವರ ಬಗ್ಗೆ ಮೃದು ಧೋರಣೆ ಅನುಸರಿಸಿದರೆ ಬಹಳ ಕಷ್ಟವಾಗಲಿದೆ. ಆರೋಪಿಗಳು ಎಷ್ಟೇ ದೊಡ್ಡವರಾದ್ರೂ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.