ಉಡುಪಿ: ಸುಹಾಸ್ ಮೇಲೆ ಗೂಬೆಕೂರಿಸುವ ಕೆಲಸವನ್ನು ಬಿಟ್ಟು, ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯಾವುದೇ ಘಟನೆಗಳಲ್ಲಿ ಸುಹಾಸ್ ಭಾಗಿಯಾಗಿಲ್ಲ. ರೌಡಿಶೀಟರ್ ಎಂದು ತೀರ್ಮಾನ ಮಾಡಬೇಕಾಗಿರೋದು ನ್ಯಾಯಾಲಯ, ಗೃಹ ಸಚಿವರಲ್ಲ.
ಹಿಂದೂ ಸಂಘಟನೆಯಲ್ಲಿ ಕೆಲಸ ಮಾಡುತ್ತಾನೆ ಎಂಬ ಕಾರಣಕ್ಕೆ ಕೊಲೆಯಾಗಿದೆ. ಹಿಂದೂಗಳ ರಕ್ಷಣೆ ಮಾಡಲು ಹೊರಟವರನ್ನು ಹತ್ಯೆ ಮಾಡುತ್ತಿದ್ದಾರೆ. ಈಗಾಗಲೇ ಟಾರ್ಗೆಟ್ ಗ್ರೂಪ್ ರಚನೆಯಾಗಿದೆ. ಟಾರ್ಗೆಟ್ ಗ್ರೂಪಿನ ಒಂದು ಅಂಶದ ಕೆಲಸ ಆರಂಭವಾಗಿದೆ. ಸುಹಾಸ್ ಮೇಲೆ ಗೂಬೆಕೂರಿಸುವ ಕೆಲಸವನ್ನು ಬಿಟ್ಟು, ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Red Blood Cells: ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಿಸಲು ಈ ಆಹಾರ ಪದಾರ್ಥ ಸೇವಿಸಿ!
ಕರಾವಳಿಯಲ್ಲಿ ಕೋಮು ನಿಗ್ರಹದಳ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಸರ್ಕಾರದ ಯೋಚನೆಯೇ ತಪ್ಪಾಗಿದೆ. ಇದು ಹಿಂದೂಗಳ ವಿರೋಧ ನೀತಿಗೆ ರಚನೆಯಾಗುತ್ತಿರುವ ಫೋರ್ಸ್. ಹಿಂದೂಗಳನ್ನು ಬಂಧಿಸಲು ಈ ದಳ ರಚಿಸುತ್ತಾರೆ. ಎಲ್ಲಾ ಸಮುದಾಯಗಳಿಗೆ ಸರಿಯಾದ ನ್ಯಾಯ ಕೊಡುವ ದಳವನ್ನು ಜಾರಿಗೆ ತರಲಿ. ಕಾಂಗ್ರೆಸ್ ಸರ್ಕಾರದ ಈ ದಳ ಒಂದೇ ಸಮುದಾಯಕ್ಕೆ ಸೀಮಿತವಾಗಿದೆ ಎಂದು ಆರೋಪಿಸಿದರು.