ಬೆಂಗಳೂರು/ಮಂಗಳೂರು:- ಗುರುವಾರ ರಾತ್ರಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷವು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ.
ಕರ್ನಾಟಕವನ್ನು ಕಾಶ್ಮೀರ ಪರಿಸ್ಥಿತಿ ಮಾಡಲು ಕಾಂಗ್ರೆಸ್ ಹೊರಟಿದಂತಿದೆ: ಬಿವೈ ವಿಜಯೇಂದ್ರ ವಾಗ್ದಾಳಿ!
ಬಿವೈ ವಿಜಯೇಂದ್ರ ಹೇಳಿದ್ದೇನು!!
ಸುಹಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಿನ್ನೆ ರಾತ್ರಿ ಮಂಗಳೂರಿನಲ್ಲಿ ಹಿಂದು ಕಾರ್ಯಕರ್ತ ಸುಹಾಸ್ ಬರ್ಬರ ಹತ್ಯೆ ನಡೆದಿದ್ದು, ಇದು ಪೂರ್ವನಿಯೋಜಿತ ಕೃತ್ಯವಾಗಿದೆ. ಇತ್ತೀಚೆಗೆ ಕಾಶ್ಮೀರದಲ್ಲಿ ಹಿಂದುಗಳ ಹತ್ಯೆಯಾಗಿತ್ತು. ಇದು ಮಾಸುವ ಮುನ್ನವೆ ಮತ್ತೆ ಮಂಗಳೂರಿನಲ್ಲಿ ಹಿಂದುವಿನ ಹತ್ಯೆಯಾಗಿದೆ..
ಸಿದ್ದರಾಮಯ್ಯ ಸರ್ಕಾರ ಬಂದಮೇಲೆ ಎನ್ ಮಾಡಿದ್ರೂ ನಡೆಯುತ್ತದೆ ಅನ್ನೋ ಮನೋಭಾವನೆ ಬಂದಿದೆ. ಅದಕ್ಕೆ ಈ ಘಟನೆ ನಡೆಯುತ್ತಿದೆ. ನಾವು ಹೇಳೋದು ಇಷ್ಟೇ.. ಗೃಹಸಚಿವರು ಬದುಕಿಲ್ಲವಾ..? ಹಿಂದು ಕಾರ್ಯಕರ್ತನ ಜೀವಕ್ಕೆ ಬೆದರಿಕೆ ಇದೆ ಎಂದು ಗೊತ್ತಿದೆ ಆದ್ರೂ ಘಟನೆ ಆಗಿದೆ ಇದಕ್ಕೆ ಏನು ಹೇಳೋಣ ಎಂದು ವಾಗ್ದಾಳಿ ನಡೆಸಿದರು.
ಸುಹಾಸ್ ಕೊಲೆಯನ್ನು ನಾವು ಖಂಡಿಸುತ್ತೆನೆ. ಬಿಜೆಪಿ ಇಂದು ರಾಜ್ಯಾವ್ಯಾಪಿ ಹೋರಾಟಕ್ಕೆ ಕರೆ ಕೊಡುತ್ತೆನೆ. ನಾನು ಈಗ ಮಂಗಳೂರಿಗೆ ಹೊರಡುತ್ತಿದ್ದೆನೆ. ನಿರಂತರವಾಗಿ ದೇಶದ್ರೋಹಿಗಳಿಗೆ ಶಕ್ತಿ ಕೊಡುತ್ತಿದ್ದಾರೆ. ಗೃಹ ಇಲಾಖೆಯ ನಿಷ್ಕ್ರಿಯತೆ ರಾಜ್ಯದಲ್ಲಿ ಇದ್ದಿವಾ ಅಥವಾ ಪಾಕ್ ನಲ್ಲಿದ್ದೆವಾ ಅನ್ನಿಸ್ತಿದೆ. ಸರ್ಕಾರದ ಮೃದು ಧೋರಣೆ ದೇಶದ್ರೋಹಿಗಳಿಗೆ ಶಕ್ತಿ ತುಂಬುತ್ತಿದೆ ಎಂದು ವಿಜಯೇಂದ್ರ ಹೇಳಿದರು.
ಕಾಂಗ್ರೆಸ್ ನವರು ಮೂರ್ಖರು:
ರಾಹುಲ್ ಗಾಂಧಿ ಒತ್ತಡದಿಂದ ಜಾತಿಗಣತಿಗೆ ನಿರ್ಧಾರ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್ ನವರು ಮೂರ್ಖರಿದ್ದಾರೆ. ರಾಹುಲ್ ಗಾಂದಿಗೆ ಹೆದರಿ ಜಾತಿಗಣತಿ ಘೋಷಣೆ ಮಾಡಿದ್ದಾರೆ ಅಂತಾರೆ. ಹಿಂದೆ ಯಾಕೆ ಇಂದಿರಾ ಗಾಂದಿ, ರಾಜೀವ್ ಗಾಂಧಿ,ಮನಮೋಹನ್ ಸಿಂಗ್ ಅವರಿಂದ ಯಾಕೆ ಮಾಡಲು ಅಗಿಲ್ಲ. ನಿಮ್ಮ ಜಾತಿಗಣತಿಗೆ ಮೋಯ್ಲಿ ಅವರು ವಿರೋಧ ಮಾಡಿದ್ದಾರೆ. ಇದಕ್ಕೆ ಸಿಎಂ ಮೊದಲು ಉತ್ತರ ಕೊಡಲಿ. ಬಿಜೆಪಿ ಶೋಷಿತರ,ಪೀಡಿತರ, ಹಿಂದುಳಿದವರ ಪರವಾಗಿ ಕೆಲಸ ಮಾಡುತ್ತೆ. ನೀವು 2014ರಲ್ಲಿ ನೀವೇ ಸಿಎಂ ಆಗಿದ್ರಿ. ಕಾಂತರಾಜು ಕೊಟ್ಟಿದ್ದ ಪ್ರತಿ ಕಾಣೆಯಾಗಿದೆ. ಇದು ಜಯಪ್ರಕಾಶ್ ಹೆಗ್ಡೆ ಕೊಟ್ಟಿದ್ದೂ ಅಥವಾ ನೀವೆ ಸೃಷ್ಟಿ ಮಾಡಿದ್ದೋ ಎಂದು ನೀವು ಹೇಳಬೇಕು. ಮೋದಿ ಸರ್ಕಾರ ಎಲ್ಲರಿಗೂ ನ್ಯಾಯ ಕೊಡಲು ಹೊರಟಿದೆ ಎಂದರು.