ತುಮಕೂರು: ಮಲಮಗನ ಕೊಂದು ಹಾವು ಕಚ್ಚಿದೆ ಎಂದು ನಾಟಕವಾಡಿದ್ದವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮೂರು ವರ್ಷದ ಮಿಥುನ್ ಗೌಡ ಕೊಲೆಯಾದ ಮಗುವಾಗಿದ್ದು, ಚಂದ್ರಶೇಖರ್ ಕೊಲೆ ಆರೋಪಿ.
ಚಾಮರಾಜನಗರ ಮೂಲದ ಕಾವ್ಯಾಗೆ ಈ ಹಿಂದೆ ಮದುವೆಯಾಗಿದ್ದು, ಒಬ್ಬ ಮಿಥುನ್ ಗೌಡ ಎಂಬ ಮಗ ಕೂಡ ಇದ್ದ. ಆದರೆ ದಾಂಪತ್ಯದಲ್ಲಿ ಬಿರುಕು ಉಂಟಾಗಿ ಗಂಡನನ್ನು ತೊರೆದಿದ್ದಳು. ಕಳೆದ ಕೆಲವು ವರ್ಷಗಳಿಂದ ಕಾವ್ಯಾ ತನ್ನ ಮಗನೊಂದಿಗೆ ಚಂದ್ರಶೇಖರ್ ಜತೆಗೆ ವಾಸವಿದ್ದರು. ತಾಲೂಕಿನ ಉರ್ಡಿಗೆರೆ ಹೋಬಳಿಯ ಸಿದ್ಧಲಿಂಗಯ್ಯನಪಾಳ್ಯದಲ್ಲಿ ವಾಸಿಸುತ್ತಿದ್ದರು.
ಬೆಂ-ಮೈ ಎಕ್ಸ್‌ಪ್ರೆಸ್ ಹೈವೇ ಸರ್ವೀಸ್ ರಸ್ತೆಯಲ್ಲಿ ಅಪಘಾತ ; ಮೂವರ ಸಾವು
ಕಾವ್ಯ ಮತ್ತು ಚಂದ್ರಶೇಖರ್ ನಡುವೆ ಮಗನ ವಿಚಾರಕ್ಕೆ ಆಗಾಗ ಗಲಾಟೆಯಾಗುತ್ತಿತ್ತು. ಮಾ.20ರಂದು ಕಾವ್ಯಾ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿದ್ದ ಮಗು ಮೇಲೆ ಚಂದ್ರಶೇಖರ್ ಹಲ್ಲೆ ಮಾಡಿದ್ದು, ಪ್ರಜ್ಞೆ ತಪ್ಪಿತ್ತು. ಹಾವು ಕಚ್ಚಿದೆ ಎಂದು ನಾಟಕವಾಡಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆ ಬಳಿಕ ಮಗುವಿನ ಅಂತ್ಯ ಸಂಸ್ಕಾರವು ನಡೆದಿದೆ. ಅಂತ್ಯ ಸಂಸ್ಕಾರದ ವೇಳೆ ಗ್ರಾಮಸ್ಥರು ಫೋಟೋ ತೆಗೆದಿದ್ದು, ಅದನ್ನು ನೋಡಿದಾಗ ಮಗುವಿನ ಸಾವಿನ ಬಗ್ಗೆ ಅನುಮಾನ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ತನಿಖೆ ಕೈಗೊಂಡು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಹಿರಂಗವಾಗಿದೆ.