ಹುಬ್ಬಳ್ಳಿ:ಸಿಎಂ ಸಿದ್ದರಾಮನವರಿಂದ ಎಎಸ್ ಪಿ ಮೇಲೆ ಮ್ಯಾನ್ ಹ್ಯಾಡಲಿಂಗ್ ಯತ್ನ ಮಾಡಿದ್ದು ಸರಿಯಾದ ಕ್ರಮವಲ್ಲ
ಇದೊಂದು ನಾಚೀಕೇಡು ಸಂಗತಿ ಆಗಿದೆ ಎಂದಿ ಶಾಸಕ ಮಹೇಶ ಟೆಂಗಿನಕಾಯಿ ಕಳವಳ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ಬಿಬಿಎಂಪಿಗೆ ಹೊಸ ಆಯುಕ್ತರು ಎಂಟ್ರಿ: ತುಷಾರ್ ಗಿರಿನಾಥ್ ವರ್ಗಾವಣೆ ಮಾಡಿದ ಸರ್ಕಾರ!
ಅನೇಕ ಕಾರ್ಯಕ್ರಮಗಳಲ್ಲಿ ಇಂತಹ ಕಪ್ಪು ಬಟ್ಟೆಗಳನ್ನ ಪ್ರದರ್ಶನ ಮಾಡಲಾಗಿದ್ದುಅನೇಕ ಕಾರ್ಯಕ್ರಮಗಳಲ್ಲಿ ಪೊಲೀಸ್ ಅಧಿಕಾರಿಗಳು ಕರ್ತವ್ಯ ಮಾಡತಾ ಇರುತ್ತಾರೆ ಈ ರೀತಿ ಮಾಡುವದು ಎಷ್ಟು ಸರಿ ಇದರ ಜೊತೆಗೆ ಅನೇಕ ಕಾರ್ಯಕ್ರಮಗಳಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ನವರು ಕಪ್ಪು ಬಟ್ಟಿ ಪ್ರದರ್ಶನ ಮಾಡಿದ್ದಾರೆ. ವೇದಿಕೆಗೆ ಪೊಲೀಸ್ ಅಧಿಕಾರಿ ಕರೆಸಿಕೊಂಡು ಹಲ್ಲೆಗೆ ಮುಂದಾಗಿರುವುದು ಒಳ್ಳೆಯ ಲಕ್ಷಣವಲ್ಲ.ಪೊಲೀಸ್ ಅಧಿಕಾರಿಗಳ ನೈತಿಕ ಸ್ಥೈರ್ಯ ಏನಾಗುತ್ತದೆ
ನಾಳೆ ಏನಾದರೂ ಅನಾಹುತ ಆದರೆ ಪೊಲೀಸ್ ಬರದೇ ಇದ್ದರೆ ಯಾರು ಇದರ ಹೊಣೆ ತೆಗೆದುಕೊಳ್ಳುತ್ತಾರೆ, ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಇದು ಮಾಡುವುದು ಸರಿಯಲ್ಲಯಾರೇ ಏನೇ ಮಾಡಿದರು ಅವರನ್ನ ಕರೆದು ಹೊರಗೆ ಹಾಕಿ ಅಂತಾ ಹೇಳಬೇಕು ಎಂದರು.
ಬಿಜೆಪಿ ಮಹಿಳಾ ಕಾರ್ಯಕರ್ತೆಯರ ಹುಡುಕಿ ಬಂಧನ ವಿಚಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೆ ಪ್ರತಿಭಟನೆ, ಹೋರಾಟ ಮಾಡುವ ಹಕ್ಕು ಇದ್ದು, ಬಿಜೆಪಿ ಮಹಿಳಾ ಕಾರ್ಯಕರ್ತನರನ್ನ ಬಂಧನ ಮಾಡುವುದು ಸರಿಯಾದ ಕ್ರಮವಲ್ಲಕಾಂಗ್ರೆಸ್ ಇದೇ ರೀತಿ ಮುಂದುವರಿಸಿದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು
ಇಂತಹ ಕ್ರಮಕ್ಕೆ ಮುಂದಾಗಬಾರದು ಎಂದರು.
ಕಪ್ಪು ಭಾವುಟ ಪ್ರದರ್ಶನ ಮುಂದುವರಿಸಿದರೆ ಬಿಜೆಪಿಯವರು ಒಂದೇ ಒಂದು ಸಭೆ ಮಾಡಲು ಬಿಡಲ್ಲ ಎಂಬ ಶಿವಕುಮಾರ್ ಹೇಳಿಕೆ ವಿಚಾರ ಇದಕ್ಕೆ ನಾವು ಹೆದರಲ್ಲ ಇಂತಹ ಎಷ್ಟು ಬೆದರಿಕೆ ಹೇಳಿಕೆ ನಾನು ನೋಡಿದ್ದೇನೆ ಅವರು ಮೊದಲು ಏನು ಮಾಡಿದ್ದಾರೆ ಹೇಳಲಿ, ಜಮ್ಮು ಕಾಶ್ಮೀರದಲ್ಲಿ ಇವರು ಮಾಡಿದರು ಮೊದಲು ಹೇಳಲಿ ಕಲಂ 370 ತೆಗೆದು ಹಾಕಿದ್ದು ನಾವು
ಸಾಕಷ್ಟು ಕಾನೂನು ಸುವ್ಯವಸ್ಥೆ ಹದಗೆಟ್ಟಿತು ಅಲ್ಲಿ ಶಾಂತಿ ನೆಲಸಿಲು ನಾವು ಮುಂದಾದವು
ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಈ ರೀತಿ ಮಾತನಾಡುವುದು ಸರಿಯಲ್ಲ, ರಾಜ್ಯದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಇದ್ದೇ ಇರುತ್ತದೆ.ಸದನದ ಹೊರಗೆ ಒಳಗೆ ಹೋರಾಟ ಮಾಡಲೇ ಬೇಕು ಇಂತಹ ಗೊಡ್ಡು ಬೆದರಿಕೆ ಬೇಡಾ ಎಂದರು