ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅನಧಿಕೃತ ಪಿಜಿಗಳಿಗೆ ಬ್ರೇಕ್ ಹಾಕಲು ಪಾಲಿಕೆ ಸಜ್ಜಾಗಿದೆ. ನಗರದ ಪಿಜಿಗಳಿಗೆ ಕಡಿವಾಣ ಹಾಕುವುದಕ್ಕೆ ಹೊರಟಿರುವ ಬಿಬಿಎಂಪಿ, ಇದೀಗ ರೂಲ್ಸ್ ಪಾಲಿಸದ ಪಿಜಿಗಳನ್ನ ಬಂದ್ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇತ್ತೀಚೆಗಷ್ಟೇ ಹೆಚ್ಎಸ್ಆರ್ ಲೇಔಟ್ನ ಲೇಡೀಸ್ ಪಿಜಿಯಲ್ಲಿ ಯುವತಿ ನಗ್ನವಾಗಿ ಓಡಾಡುವ ವಿಷಯ ಸಖತ್ ಸದ್ದುಮಾಡಿತ್ತು. ಅಲ್ಲದೇ ಪಿಜಿಯಿಂದ ಅಕ್ಕಪಕ್ಕದ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ ಅನ್ನೋ ದೂರುಗಳು ಕೂಡ ಕೇಳಿಬಂದಿತ್ತು. ಸದ್ಯ ಈ ಘಟನೆ ಬಳಿಕ ಎಚ್ಚೆತ್ತ ಪಾಲಿಕೆ ಇದೀಗ ರಾಜಧಾನಿಯ ಅನಧಿಕೃತ ಪಿಜಿಗಳಿಗೆ ಬಿಸಿಮುಟ್ಟಿಸೋಕೆ ಸಜ್ಜಾಗಿದೆ. ರಾಜಧಾನಿಯ ಪಿಜಿಗಳಿಗೆ ಈಗಾಗಲೇ ಕೆಲ ಮಾರ್ಗಸೂಚಿಗಳನ್ನ ಹೊರಡಿಸಿದ್ದ ಪಾಲಿಕೆ, ಇದೀಗ ರೂಲ್ಸ್ ಬ್ರೇಕ್ ಮಾಡುತ್ತಿರುವ ಪಿಜಿಗಳನ್ನ ಬಂದ್ ಮಾಡಿಸುವುದಕ್ಕೆ ಸಜ್ಜಾಗಿವೆ.
ಇನ್ನು ಬಿಬಿಎಂಪಿಯ ವಿವಿಧ ವಲಯಗಳಲ್ಲಿ ಈಗಾಗಲೇ ನಿಯಮ ಮೀರಿದ ಪಿಜಿಗಳಿಗೆ ಬೀಗ ಜಡಿಯೋ ಎಚ್ಚರಿಕೆ ಪಾಲಿಕೆ ನೀಡಿದೆ. ಇತ್ತ ಪಿಜಿಗಳಿಂದ ಏರಿಯಾ ನಿವಾಸಿಗಳು, ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಗಮನಹರಿಸೋಕೆ ತಯಾರಿ ನಡೆಸಿದೆ. ಸದ್ಯ ಈಗಾಗಲೇ ಪಿಜಿಗಳಿಗೆ ಹೊರಡಿಸಿದ್ದ ಕೆಲ ರೂಲ್ಸ್ಗಳನ್ನ ಹಲವು ಪಿಜಿ ಮಾಲೀಕರು ವಿರೋಧಿಸಿದ್ದರು. ಆದರೆ ಇದೀಗ ನಿಯಮ ಪಾಲಿಸದ ಪಿಜಿಗಳಿಗೆ ಬಿಸಿ ಮುಟ್ಟಿಸೋಕೆ ಪಾಲಿಕೆ ಚಿಂತನೆ ನಡೆಸಿದೆ.