ಬರ್ವಾನಿ:- ನಿಗೂಢ ಪ್ರಾಣಿಯೊಂದು 6 ಮಂದಿಯನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಜರುಗಿದೆ. ಮೇ 5ರಂದು ಬೆಳಗಿನ ಜಾವ 1 ರಿಂದ 5 ಗಂಟೆ ನಡುವೆ ಈ ಘಟನೆ ನಡೆದಿದೆ.
ಕೊಹ್ಲಿಗೆ ನೀವು ಎಚ್ಚರಿಕೆ ನೀಡಬೇಕಿತ್ತು: ಅಂಪೈರ್ ವಿರುದ್ಧ ಗರಂ ಆದ ಗವಾಸ್ಕರ್!
ಗ್ರಾಮದ 17 ಮಂದಿ ಮಲಗಿದ್ದರು, ಜನರು ಮಲಗಿದ್ದಾಗ ಪ್ರಾಣಿ ದಾಳಿ ಮಾಡಿದೆ. ಪ್ರಾಣಿ ಯಾವುದೆಂದು ಗುರುತಿಸಲು ಸಾಧ್ಯವಾಗಲಿಲ್ಲ. ಲಿಂಬೈ ಗ್ರಾಮದ ಮೂರು ಸ್ಥಳಗಳಲ್ಲಿ ಆ ಪ್ರಾಣಿ ದಾಳಿ ನಡೆಸಿದೆ. ಒಬ್ಬರು ಅಂಗಳ ಗುಡಿಸುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದೆ. ಬದುಕುಳಿದವರು ಆ ಪ್ರಾಣಿ ನಾಯಿಯಂತೆ ಕಾಣುತ್ತಿತ್ತು.
ಬೊಗಳಲಿಲ್ಲ, ಗುರುಗುಟ್ಟಲೂ ಇಲ್ಲ ನೆರಳಿನಂತೆ ಬಂದು ಕಚ್ಚಿ ಕಣ್ಮರೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಎಲ್ಲಾ 17 ಮಂದಿಗೆ ಬರ್ವಾನಿ ಮತ್ತು ಇಂದೋರ್‌ನ ವೈದ್ಯಕೀಯ ಕೇಂದ್ರಗಳಲ್ಲಿ ರೇಬೀಸ್ ವಿರೋಧಿ ಲಸಿಕೆ ನೀಡಲಾಯಿತು. ಆದರೆ ಮೇ 23 ಮತ್ತು ಜೂನ್ 2 ರ ನಡುವೆ, ಅವರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.