ಲಕ್ನೋ: ಎಲ್ಲಿ ಮಹಿಳೆಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ನಂಬಿಕೆ ಇರುವ ದೇಶ ಭಾರತ. ಆದರೆ, ವಾಸ್ತವದಲ್ಲಿ ಭಾರತದ ಮಹಿಳೆಯರು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದಾರೆ. ಅದಕ್ಕೆ ಕಾರಣ ಇತ್ತೀಚೆಗೆ ಮಹಿಳೆಯರ ಮೇಲೆ ನಡೆಯುತ್ತಿರುವ ಭೀಕರ ಅತ್ಯಾಚಾರಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು.
ಹೌದು ಇದೀಗ ಉತ್ತರ ಪ್ರದೇಶದ ರಾಂಪುರ್ನಲ್ಲಿ ಕಿವಿ ಕೇಳಿಸದ, ಮಾತು ಸಹ ಬಾರದ 11ರ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಖಾಸಗಿ ಭಾಗಗಳಿಗೆ ಸಿಗರೇಟ್ನಿಂದ ಸುಟ್ಟು ವಿಕೃತಿ ಮೆರೆದಿರುವ ಘಟನೆ ನಡೆದಿದೆ.
ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ದೇಹದ ವಿವಿಧ ಭಾಗಗಳಲ್ಲಿ ಕಚ್ಚಿದ ಹಾಗೂ ಖಾಸಗಿ ಭಾಗಗಳಿಗೆ ಸಿಗರೇಟ್ನಿಂದ ಸುಟ್ಟ ಗುರತುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ಶಂಕಿತನನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ದಿಕ್ಕಿನಲ್ಲಿ ಪೊರಕೆಯನ್ನು ಇಡಬಾರದು..! ಏನಾಗುತ್ತೆ ಗೊತ್ತಾ..?
ವೈದ್ಯಕೀಯ ಪರೀಕ್ಷೆ ನಡೆಸಿದ ಡಾ. ಅಂಜು ಸಿಂಗ್ ಅವರು, ಇದು ಒಂದಕ್ಕಿಂತ ಹೆಚ್ಚಿನ ವ್ಯಕ್ತಿಗಳು ನಡೆಸಿದ ಕೃತ್ಯ ಎಂಬುದು ಸ್ಪಷ್ಟವಾಗಿದೆ. ಖಾಸಗಿ ಭಾಗಗಳಲ್ಲಿ ಗಾಯದ ಗುರುತುಗಳಿವೆ, ಆಕೆಯ ಮುಖಕ್ಕೆ ಬಲವಾಗಿ ಹೊಡೆದಿರುವುದರಿಂದ ಮುಖ ಊದಿಕೊಂಡಿದೆ, ಅಲ್ಲದೇ ದೇಹದ ವಿವಿಧ ಭಾಗಗಳಲ್ಲಿ ಕಚ್ಚಿರುವ ಗುರುತುಗಳಿವೆ. ಅಷ್ಟಲ್ಲದೇ ಹುಡುಗಿಯ ಬಟ್ಟೆ ಪೂರ್ತಿ ರಕ್ತದ ಕಲೆಗಳಿಂದ ಕೂಡಿತ್ತು ಎಂದು ವಿವರಿಸಿದ್ದಾರೆ.
ಸದ್ಯ ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಲಾಗಿದೆ. ಬಾಲಕಿ ಭಯಭೀತಳಾಗಿದ್ದರಿಂದ ಆಕೆಯನ್ನ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗಿದೆ. ಕೃತ್ಯ ನಡೆದಾಗಿನಿಂದ ಬಾಲಕಿಗೆ ಆತಂಕಗೊಂಡಾಗಲೆಲ್ಲ ಫಿಟ್ಸ್ ಬರುತ್ತಿದೆ ಎಂದು ಆಕೆಯ ತಾಯಿ ಅಳಲು ತೋಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.