Close Menu
Ain Live News
    Facebook X (Twitter) Instagram YouTube
    Tuesday, June 17
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಬಳ್ಳಾರಿ: ನ್ಯಾಯ ಬೆಲೆ ಅಂಗಡಿಯ ಮಾಲಿಕರಿಂದಲೇ ಪಡಿತರ ಅಕ್ಕಿಗೆ ಕನ್ನ

    By AIN AuthorNovember 27, 2023
    Share
    Facebook Twitter LinkedIn Pinterest Email
    Demo

    ಬಳ್ಳಾರಿ:- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೇಯ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯ, ಪಡಿತರ ಅಕ್ಕಿಗೆ ನ್ಯಾಯ ಬೆಲೆಯ ಅಂಗಡಿಯ ಮಾಲೀಕರೆ ಕನ್ನ ಹಾಕಿರುವ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.ಬಡವರ ಹೊಟ್ಟೆ ತುಂಬಿಸುವ ಸಲುವಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದರೇ, ಇತ್ತ ಕಡೆ ಬಡವರಿಗೆ ತಲುಪುವ ಮಾರ್ಗದಲ್ಲಿಯೇ ಸೋರಿಕೆಯ ಮಾರ್ಗಗಳು ಬೆಳಕಿಗೆ ಬಂದಿವೆ.ಈ ಕುರಿತು ಒಂದು ಸ್ಟೋರಿಯನ್ನು ನೋಡೋಣ ಬನ್ನಿ…..

    • ನ್ಯಾಯ ಬೆಲೆ ಅಂಗಡಿಯ ಮಾಲೀಕರಿಂದಲೇ ಪಡಿತರದಾರರಿಗೆ ಮೋಸ,

    • ಕಣ್ಮುಚಿ ಕುಳಿತ ಆಹಾರ ಇಲಾಖೆಯ ಅಧಿಕಾರಿಗಳು,

    • ತಕ್ಕಡಿಯ ಅಳತೆಯಲ್ಲಿ ಗೋಲ್ ಮಾಲ್,

    • 5 ಕೆಜಿ ತುಕಕ್ಕೆ- 4 ಕೆಜಿ ಅಕ್ಕಿ ವಿತರಣೆ,

    • ಪಡಿತರದಾರರಿಂದ ತೀವ್ರ ವೀರೋಧ,

    ರಾಜ್ಯದ ಜನರು ಯಾರು ಸಹ ಹಸಿವುನಿಂದ ಬಳಲಬಾರದು ಎಂದು ರಾಜ್ಯ ಸರ್ಕಾರ ಜಾರಿಗೆ ತಂದ ಈ ಅನ್ನಭಾಗ್ಯ ಯೋಜನೆಯ ಅಕ್ಕಿಗೆ ಕಳ್ಳಾರ ಕಾಟ ಹೆಚ್ಚಾಗಿದೆ.
    ಇಲ್ಲಿಯವರಗೆ ಕೇವಲ ಹೊರಗಿನ ಕಳ್ಳರನ್ನು ಮಾತ್ರ ನೋಡಿದ್ದು ಉಂಟು.ಆದರೆ ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಡಿ.ಅಂತಪುರ ಗ್ರಾಮದಲ್ಲಿ ನ್ಯಾಯ ಬೆಲೆ ಅಂಗಡಿಯ ಮಾಲೀಕರೆ ತಕ್ಕಡಿಯ ತೂಕದ ಅಳತೆಯಲ್ಲಿ ಗೋಲ್ ಮಾಲ್ ಮಾಡುವ ಮುಖಾಂತರ ಗ್ರಾಹಕರ ಕಣ್ಣಿಗೆ ಮಣ್ಣೆರಚುವ ಕಾರ್ಯಮಾಡಿದ್ದಾರೆ.ಈ ಮೂಲಕ ಬೆಲಿಯೇ ಎದ್ದು ಹೊಲ ಮೈಯುವ ಕೆಲಸವಾಗಿದೆ ಎಂದು ಗ್ರಾಹಕರು ಇಡಿ ಶಾಪ ಹಾಕುತ್ತಿದ್ದಾರೆ.

    ಎರಡು ದಿನಗಳಿಂದ ಗ್ರಾಹಕರಿಗೆ ಅಕ್ಕಿ ವಿತರಿಸುವ ಕಾರ್ಯ ಡಿ.ಅಂತಪುರ ಗ್ರಾಮದ ನ್ಯಾಯ ಬೆಲೆ ಅಂಗಡಿಯ ಮಾಲೀಕ ಮಾಡುತ್ತಿದ್ದು, ಡಿಜಿಟಲ್ ತೂಕದ ತಕ್ಕಡಿಯ ಮೂಲಕ ಗ್ರಾಹಕರಿಗೆ ವಿತರಿಸುವ ಕಾರ್ಯ ನಡೆಯುತಿತ್ತು. ಪ್ರತಿ ಗ್ರಾಹಕರಿಗೆ 5KG ತೂಕದಂತೆ ನೀಡುವ ಕಾರ್ಯ ಮಾಡಬೇಕಿತ್ತು. ಆದರೆ ಅದೇ ಅಕ್ಕಿಯನ್ನು ಬೇರೆ ಕಡೆ ತೂಕ ಮಾಡಿದಾಗ ಕೇವಲ 4 KG ಮಾತ್ರ ವಿತರಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತಕ್ಕಡಿಯ ತೂಕದಲ್ಲಿ ಗೋಲ್‌ಮಾಲ್ ಮಾಡುವ ಮೂಲಕ ಪ್ರತಿಯೊಬ್ಬ ಗ್ರಾಹಕನ ಕಡೆಯಿಂದ 1 KG ಅಕ್ಕಿಯನ್ನು ಕದಿಯುವ ಕಾರ್ಯ ಮಾಡಲಾಗಿದೆ ಎಂದು ಗಂಭೀರ ಆರೋಪ ಪಡಿತರದಾರರಿಂದ ಕೇಳಿಬಂದಿದೆ.ಈ ಮೂಲಕ ಗ್ರಾಹಕರ ಹೊಟ್ಟೆ ಒಡೆಯುವ ಕಾರ್ಯವನ್ನು ನ್ಯಾಯಬೆಲೆ ಅಂಗಡಿಯ ಮಾಲೀಕ ಮಾಡಿದ್ದಾನೆ. ಈ ಕುರಿತು ನಿಗಾವಹಿಸಿದ ಗ್ರಾಹಕರು ಸ್ಥಳದಲ್ಲಿಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದೂರು ದಾಖಲಿಸಲು ಮುಂದಾಗಿದ್ದಾರೆ.

    ಈ ರೀತಿಯ ಆರೋಪಗಳು ಜಿಲ್ಲೆಯಾದ್ಯಾಂತ ಆಗಾಗ ಕೇಳಿ ಬರುತ್ತಿವೆ. ಸರ್ಕಾರ ಈ ರೀತಿಯ ಆರೋಪ ಕೇಳಿಬಂದ ನ್ಯಾಯ ಬೆಲೆ ಅಂಗಡಿಗಳ ಪರವಾನಿಗೆಯನ್ನು ಕೂಡಲೇ ರದ್ದುಪಡಿಸಿ, ಬ್ಲಾಕ್ ಲಿಸ್ಟ್ ಗೆ ಹಾಕಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದಾರೆ. ಆಗ ಮಾತ್ರ ಈ ರೀತಿಯ ಘಟನೆಗಳು ಮರುಕಳಿಸದಂತೆ ತಡೆಯಬಹುದು ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.ಈ ಕುರಿತು ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುವುದೋ ಕಾದು ನೋಡಬೇಕಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    ರೈತರಿಗೆ ‘ಮಾವು’ ಸಂಕಷ್ಟ: ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟ ಅನ್ನದಾತರು!

    June 16, 2025

    ಕಾಂತಾರಕ್ಕೆ ಕಂಟಕ: ಸಿನಿಮಾ ತಂಡಕ್ಕೆ ನೋಟಿಸ್ ಕೊಟ್ಟ ತಹಸೀಲ್ದಾರ್!

    June 16, 2025

    ಹೃದಯಾಘಾತ: ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದ ಯುವಕ ಸಾವು!

    June 16, 2025

    ಕೋಲಾರ: ನೀರೆಂದು ಭಾವಿಸಿ ಕೀಟನಾಶಕ ಕುಡಿದು ಇಬ್ಬರು ಕಾರ್ಮಿಕರು ಸಾವು!

    June 16, 2025

    ಕೋಲಾರ: SBI ಎಟಿಎಂನಲ್ಲಿದ್ದ 27 ಲಕ್ಷ ರೂಪಾಯಿ ದೋಚಿದ ಕಳ್ಳರು!

    June 16, 2025

    ಸಶಕ್ತ ಭಾರತ ಹಾಗೂ ಹಿಂದೂಗಳ ರಕ್ಷಣೆಗಾಗಿ ಮೂರನೇ ಯೋಜನೆ: ಪ್ರವೀಣ್ ಭಾಯಿ ತೊಗಡಿಯಾ

    June 16, 2025

    ಘೋರ ದುರಂತ.. ಹೃದಯಾಘಾತದಿಂದ ಹಿರಿಯ ನ್ಯಾಯಾಧೀಶ ಸಾವು..!

    June 16, 2025

    ಪ್ರಕೃತಿ ನಟ್ಟ ನಡುವೆ ಪುಟ್ಟ ಪುಟ್ಟ ಮನೆಗಳು.. ದಶಕಗಳೇ ಕಳೆದ್ರು ಕೂಡ ಈ ಗ್ರಾಮಕ್ಕಿಲ್ಲ ಸರಿಯಾದ ರಸ್ತೆ, ವಿದ್ಯುತ್ ಸಂಪರ್ಕ

    June 16, 2025

    ‘ಪೋಲಿ‘ಸಪ್ಪನ ಹನಿ ಕಹಾನಿ! Honeytrapಗೆ ಸ್ಕೆಚ್ ಹಾಕಿದ್ದ ಪೊಲೀಸ್ ಸಿಬ್ಬಂದಿ ಅರೆಸ್ಟ್..!

    June 16, 2025

    Doddaballapur Crime: ಸ್ನೇಹಿತರ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ..!

    June 16, 2025

    ಕರಾವಳಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ: ಮರ ಬಿದ್ದು ಬೈಕ್ ಸವಾರ ಸಾವು..!

    June 16, 2025

    ಕುರ್ಚಿ ಉಳಿಸಿಕೊಳ್ಳುವುದಕ್ಕೋಸ್ಕರ ಸಿದ್ದರಾಮಯ್ಯ ಜನರ ಗಮನ ಡೈವರ್ಟ್ ಮಾಡುತ್ತಿದ್ದಾರೆ ಅಷ್ಟೆ : ಪ್ರತಾಪ್ ಸಿಂಹ ಕಿಡಿ

    June 16, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.